ದೇವರಿಗೆ ಭಕ್ತಿಯಿಂದ ಹಚ್ಚೋ ಅಗರಬತ್ತಿ ಯಿಂದ ಆರೋಗ್ಯಕ್ಕೆ ಹಾನಿಕಾರಕ, ಬೆಚ್ಚಿ ಬೀಳಿಸುವ ಸಂಗತಿ; ನೀವು ಓದಲೇ ಬೇಕು!!

0
2273

ಭಾರತೀಯರಿಗೆ ಪ್ರತಿದಿನವೂ ಬೆಳಗಾದರೆ ನೆನಪಿಗೆ ಬರೋದೆ ದೇವರು, ಜನರು ಕಷ್ಟ-ಸುಖಕ್ಕಾಗಿ ನೆನೆಯೋದೆ ದೇವರನ್ನ ಆದರಿಂದ ದೇವರಿಗೆ ಪೂಜೆ ಮಾಡಿ ಎಣ್ಣೆಯ ದೀಪ, ತುಪ್ಪದ ದೀಪ, ಉದಬತ್ತಿ ಹಚ್ಚಿ ಭಕ್ತಿಯಿಂದ ಬೇಡಿಕೊಂಡು ದಿನನಿತ್ಯದ ಕೆಲಸದಲ್ಲಿ ತೊಡಗುವುದು ನಮ್ಮ ಭಾರತೀಯರ ಸಂಪ್ರದಾಯ. ಇದೆ ಕಾರಣಕ್ಕೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ದಿನನಿತ್ಯದ ಆಹಾರ ವಸ್ತುಗಳು ಇಲ್ಲದಿದ್ದರೂ ದೇವರ ಮನೆಯಲ್ಲಿ ಮಾತ್ರ ಉದಬತ್ತಿ ಇರಲೇಬೇಕು.

ಚಿಕ್ಕ ಮಕ್ಕಳಿಂದ ಹಿಡಿದು ವೃದರವರಗೆ ಪ್ರತಿನಿತ್ಯವೂ ದೇವರಿಗೆ ಕೈಮುಗಿದು ಉದಬತ್ತಿಯನ್ನು ಹಚ್ಚಬೇಕು ಅಂತ ವಂಶಪಾರಂಪರ್ಯದಿಂದ ಬಂದ ಒಂದು ಕೊಡುಗೆಯಾಗಿದೆ ಅದನ್ನೇ ಮುಂದುವರೆಸಿಕೊಂಡು ಬಂದ ಈ ಅಗರಬತ್ತಿ ಸಂಪ್ರದಾಯದಿಂದ ನಮ್ಮಗೆ ಒಳ್ಳೆಯದೇ ಆಗುತ್ತೆ ಎಂಬ ಮನೋಭಾವ ಎಲ್ಲರಲ್ಲಿ. ಆದ್ರೆ ಕೆಲವೊಂದು ಒಳಿತ್ತಿನಲ್ಲಿ ಕೆಟ್ಟ ವಿಷಯ ಅಡಗಿರುತ್ತೆ ಎಂಬುದು ಯಾರು ತಿಳಿದಿರುವುದಿಲ್ಲ. ಅಂತಹದೇ ಬಕ್ತಿಯಿಂದ ಹಚ್ಚುವ ಅಗರಬತ್ತಿಯಿಂದ ಎಷ್ಟೊಂದು ಖಾಯಿಲೆಗಳು ಬರುತ್ತೇವೆ, ಇದು ಕೇಳಲು ಕಹಿ ಸತ್ಯೆ ಅನಿಸಿದ್ರು ಖಾಯಿಲೆಗಳು ಕಟ್ಟಿಟಬುತ್ತಿನೆ.

1. ಶರೀರದಲ್ಲಿ ವಿಷಪ್ರಮಾಣದ ಹೆಚ್ಚಳ:
ಕೆಮಿಕಲ್ ಇರುವ ಅಗರಬತ್ತಿಗಳು ಹೊರಸೂಸುವ ಹೊಗೆಯಲ್ಲಿ ಶಿಸ, ಕಬ್ಬಿಣ, ಮೆಗ್ನೀಷಿಯಂ ಅಂಶಗಳು ಇದು ಇವುಗಳು ಶರೀರದಲ್ಲಿ ವಿಷದಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಆಗ ಮೂತ್ರಪಿಂಡಕೆ ಒತ್ತಡ ಹೆಚ್ಚಾಗುತ್ತೆ ಏಕೆಂದರೆ ವಿಷಕಾರಿ ಅಂಶವನ್ನು ಹೊರಹಾಕಲ್ಲು ಮೂತ್ರಪಿಂಡದ ಮೇಲೆ ಹೆಚ್ಚಾದ ಒತ್ತಡ ಬಿಳ್ಳುತ್ತೆ ಇದರಿಂದ ಕಿಡ್ನಿ ಬೇಗನೆ ಹಾಳಾಗುವ ಸಂಭವವಿರುತ್ತದೆ.

2.ತ್ವಚೆಯ ಸಮಸ್ಯೆಗೆ ಕಾರಣವಾಗುತ್ತೆ:
“ದೆಹಲಿಯ ಚರ್ಮ ಮತ್ತು ಪ್ರಸಾಧನ ಕೇಂದ್ರದ ಚ್ರಮರೋಗ ತಜ್ಞರಾಗಿರುವ “ಡಾ. ಅನಿಲ್ ಗಂಜು” ಅವರು ಈ ವಿಷಯದ ಬಗ್ಗೆ ಅಧ್ಯಾಯನ ಮಾಡಿ ತೆಳುವಿನ ಚರ್ಮವಿರುವ ದೇಹದ ಭಾಗಗಳು ಅಲರ್ಜಿಗೆ ಒಳಗಾಗುತ್ತೆ ಅಂತ ತಿಳಿಸಿದ್ದಾರೆ. ಕೆಮಿಕಲ್ ಅಗರಬತ್ತಿಯ ಹೊಗೆಯಿಂದ ಶೀಘ್ರವಾಗಿ ಅಪಾಯವಾಗದಿದ್ದರು ನಿಧಾನವಾಗಿ ಅಪಾಯವನ್ನು ತರುತ್ತೆ. ವಿಶೇಷವಾಗಿ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಕಣ್ಣು ಉರಿಯನ್ನುಂಟು ಮಾಡುತ್ತೆ ಎಂದು ಡಾ. ಅನಿಲ್ ಗಂಜು ತಿಳಿಸಿದ್ದಾರೆ.
3. ನರಗಳಿಗೆ ಮತ್ತು ಮೆದುಳಿಗೆ ರೋಗ ತರುತ್ತದೆ:
ಕೆಮಿಕಲ್ ಉಳ್ಳ ವಿಷ ಅಗರಬತ್ತಿಗಳು ನರಕ್ಕೆ ಸಂಬಂಧಿಸಿದ ರೋಗವನ್ನು ಹುಟ್ಟುಹಾಕುತ್ತೆ ಇದರಿಂದ ಮೆದುಳಿನ ಮೇಲೆ ಪರಿಣಾಮವಾಗಿ ಏಕಾಗ್ರತೆ ಹಾಗು ಮರುವಿನ ಸಮಸ್ಯೆಗಳು ಕಂಡು ಬರುತ್ತೆ. ಇಂತಹ ಕೆಟ್ಟವಿಷವುಳ್ಳ ಅಗರಬತ್ತಿಯನ್ನು ಪ್ರತಿನಿತ್ಯವೂ ಮನೆಯಲ್ಲ್ಲಿ ಹಚ್ಚುವುದರಿಂದ ವಾಯುಮಾಲಿನ್ಯವಾಗಿ ರಕ್ತದಲ್ಲಿ ingaladamonoxide, sarajanakada acide ಪ್ರಮಾಣ ಹೆಚ್ಚು ಸೇರಿಕೊಳುತ್ತದೆ ಇವುಗಳಿಂದ ಮೆದುಳಿನ ಜೀವಕೋಶದ ಮೇಲೆ ಹಾನಿಮಾಡುತ್ತೆ.

4. ಶ್ವಾಸಕೋಶದ ಸಮಸ್ಯೆಗೆ ಕಾರಣವಾಗುತ್ತೆ.
ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಅಗರಬತ್ತಿಗಳು ಶ್ವಾಸಕೋಶದ, ಹಾಗು ಉಬ್ಬಸಗಳ ರೋಗವನ್ನು ತರುತ್ತಿವೆ. ಇಂತಹ ಅಗರಬತ್ತಿಯಿಂದ ಬರುವ ಹೊಗೆವು ವಿಷಮಯವಾಗಿದೆ. ಏಕೆಂದರೆ ಇವುಗಳಲ್ಲಿ ಶ್ವಾಸಕೋಶಕ್ಕೆ ಮಾರಕವಾಗಬಲ್ಲ “gandhak acid, ingalada monoxide , sarajanaka, ಮತ್ತು formaldehyde acid , ಗಳಂತ ಅಪಾಯಕಾರಿ ಅಂಶಗಳು ಇರುತ್ತೆ ಇದರಿಂದ ವ್ಯಕ್ತಿಯ ಧೀರ್ಘವಾಗಿ ರೋಗಕ್ಕೆ ಒಳಗಾಗುತ್ತಾರೆ.
5. ಹೃದಯದ ಸ್ವಾಸ್ಥೆ ಹಾಳು ಮಾಡುತ್ತೆ :
ದೇಹಲಿಯ ಅಧ್ಯಯನಯೊಂದು ಹೇಳಿರುವ ಪ್ರಕಾರ ಹೃದಯ ರೋಗದಿಂದ ಸಾಯಿವವರ ಸಂಖ್ಯೆಯನ್ನು 12% ಬಹುಮಟಕ್ಕೆ ಏರಿಸಿದೆ. ಹೃದಯದ ಸಂಕೀರ್ಣ ಸ್ಥಿತಿಗೆ ಕಾರಣವಾಗಿದೆ.
6. ಕೆಲವೊಂದು ಎಚ್ಚರಿಕೆ ಕ್ರಮವಾಗಿ :
ಅಗರಬತ್ತಿಯ ಬಳಕೆಯ ಪ್ರಮಾಣವನ್ನು ಕಡಿಮೆಮಾಡಿ, ಕೆಮಿಕಲ್ ಇಲ್ಲದ ಅಗರಬತ್ತಿಯನ್ನು ಉಪಯೋಗ ಮಾಡುವುದು ಒಳ್ಳೆಯದು, ಬೆರಣಿ ಮುಂತಾದ ನೈಸರ್ಗಿಕ ಪದಾರ್ಥಗಳನ್ನೇ ಉಪಯೋಗಿಸಿ ,  ಕೇವಲ ವಾಸನೆಗೆ ಮಾರುಹೋಗಿ ಹೆಚ್ಚು ಹಣ ಕೊಟ್ಟು  ಖರೀದಿಸುವ ಅಗರಬತ್ತಿಯ ತಯಾರಿಕೆಯಲ್ಲಿ ಬಳಸಿದ ವಸ್ತುಗಳನ್ನು ಪರಿಸಿಲಿಸಿ ಇಲ್ಲ ಅಂದ್ರೆ ನಿಮ್ಮ ಸಾವಿಗೆ ನೀವೇ ಕಾರಣವಾಗುತ್ತಿರ.