ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಅತಿಯಾಗಿ ಪ್ರೀತಿಸುವ ಗಂಡನಿಂದ ಡೈವರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ..

0
535

ಈಗಿನ ಕಾಲದಲ್ಲಿ ಡೈವರ್ಸ್ ಎನ್ನುವುದು ಇಂದು ಫ್ಯಾಷನ್ ರೀತಿಯಲ್ಲಿ ನಡೆಯುತ್ತಿದೆ. ಒಂದು ರೀತಿಯಲ್ಲಿ ನೋಡಿದರೆ ಈ ಕಾಯ್ದೆ ಒಳ್ಳೆಯದೇ ಅನಿಸಿದರು ಒಂದೊಮ್ಮೆ ನಗೆ ಪಾಟಿಗೆ ಕಾರಣವಾಗುತ್ತೆ. ಏಕೆಂದರೆ ಪ್ರತಿನಿತ್ಯವೂ ಸಾವಿರಾರು ಡೈವರ್ಸ್ ವಿಚಾರಗಳು ಕೇಳಿ ಬರುತ್ತಿವೆ ಅದರಲ್ಲಿ ಕೆಲವು ವಿಚ್ಚೇದನದ ಕಾರಣ ಕೇಳಿದರೆ ಜನರು ಯಾವ ಮಟ್ಟಕ್ಕೆ ಬಂದರು ಎನ್ನುವುದು ಗಾಡವಾದ ವಿಚಾರಕ್ಕೆ ತಳ್ಳುತ್ತೆ. ಏಕೆಂದರೆ ಗಂಡ ಸ್ನಾನ ಮಾಡುವುದಿಲ್ಲವೆಂದು ಡೈವರ್ಸ್ ಆಗಿದೆ, ಮೊಬೈಲ್ ಬಳಸಲು ಬಿಡುತ್ತಿಲ್ಲ ಎನುವುದಕ್ಕೆ ಡ್ರೈವರ್ಸ್ ಆಗಿದೆ, ಇನ್ನೂ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿಲ್ಲ ಎನ್ನುವ ವಿಚಾರಕ್ಕೆ ಡೈವರ್ಸ್ ಆಗಿದ್ದು ಸಾಕಷ್ಟಿವೆ, ಅದರಂತೆ ಈಗೊಂದು ವಿಚಿತ್ರ ಡೈವರ್ಸ್ ಆಗಿದ್ದು. ಹೆಂಡತಿಯನ್ನು ಪ್ರೀತಿಸುವ ಗಂಡದರಿಗೆ ಹೆದರಿಕೆ ಶುರುವಾಗಿದೆ.

ಸಂಧರ್ಬಿಕ ಚಿತ್ರ

Also read: ಕಸಕ್ಕೂ ಬಂತೂ ಭಾರಿ ಬೇಡಿಕೆ; ಕಸ ತಂದುಕೊಟ್ರೆ ಊಟ, ತಿಂಡಿ ಫ್ರೀ! ಅರ್ಧ ಕೆಜಿ ಕಸಕ್ಕೆ ಟಿಫನ್, ಒಂದು ಕೆಜಿ ಕಸಕ್ಕೆ ಊಟ..

ಹೌದು ನಾನಾ ತರಹದ ಡೈವರ್ಸ್ ಕೇಸ್-ಗಳು ನಡೆಯುತ್ತಿದ್ದು ಕೆಲವನ್ನು ಕೇಳಿದರೆ ವಿಚಿತ್ರ ಅನಿಸುತ್ತೆ ಅದರಲ್ಲಿ ಈಗೊಂದು ಡೈವರ್ಸ್ ಆಗಿದ್ದು ಇದು ಯಾವ ಕಾರಣಕ್ಕೆ ಎನ್ನುವುದು ತಿಳಿದರೆ ಸಾಕಪ್ಪ ಜೀವನ ಅನಿಸುತ್ತೆ, ಅಂತಹ ಡೈವರ್ಸ್ ಕೇಸ್ ಏನೆಂದರೆ. ಗಂಡನ ಅತಿಯಾದ ಪ್ರೀತಿ ಈ ಮಹಿಳೆಗೆ ಬೇಸರ ತರಿಸಿ. ಇಷ್ಟೊಂದು ಮುದ್ದಿಸುವ ಗಂಡನ ನನಗೆ ಬೇಡ ಎಂದು ಕೋರ್ಟ್​ ಮೆಟ್ಟಿಲೇರಿದ್ದಾಳೆ. ಆಯೋ ಇದೇನಿದು ಗಂಡ ತಮ್ಮನ್ನು ತುಂಬಾ ಪ್ರೀತಿಸಬೇಕು ಎಂಬುದು ಪ್ರತಿಯೊಬ್ಬ ಹೆಣ್ಣು ಮಕ್ಕಳ ಆಸೆ. ಆದರೆ ಇಲ್ಲಿ ಈ ಮಹಿಳೆಗೆ ಏನಾಗಿದೆ ಎನ್ನುವುದು ಎಲ್ಲರಿಗೂ ಹುಟ್ಟುವ ಪ್ರಶ್ನೆಯಾಗಿದೆ.

ಸಂಧರ್ಬಿಕ ಚಿತ್ರ

Also read: ವಿಮಾನಕ್ಕೆ ಹಕ್ಕಿಗಳ ಹಿಂಡೊಂದು ಡಿಕ್ಕಿ; ಮೆಕ್ಕೆಜೋಳದ ಹೊಲದಲ್ಲಿ ತುರ್ತು ಲ್ಯಾಂಡ್ 233 ಪ್ರಯಾಣಿಕರ ಜೀವ ಉಳಿಸಿದ ಪೈಲೆಟ್!!

ಆಗಿದ್ದು ಏನು?

ಸಂಯುಕ್ತ ಸಂಸ್ಥಾನದಲ್ಲಿ ಮಹಿಳೆಯೊಬ್ಬಳು ಅತಿಯಾಗಿ ಪ್ರೀತಿಸುವ ಗಂಡನಿಂದ ಮುಕ್ತಿಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ. ಒಂದು ವರ್ಷದ ಹಿಂದಷ್ಟೆ ಮದುವೆಯಾದ ಈ ಜೋಡಿ ಸುಖವಾಗಿ ಸಂಸಾರ ನಡೆಸುತ್ತಿದ್ದು, ಪತಿ ತನ್ನ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಆಕೆ ಕಷ್ಟಪಡಬಾರದೆಂದು ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತದ್ದ. ಮನೆಯ ಕೆಲಸವನ್ನು ಮಾಡಲು ಬಿಡುವುದಿಲ್ಲ. ಅಡುಗೆ ಕೂಡ ಅವರೇ ಮಾಡುತ್ತಾರೆ. ಸಿಟ್ಟು ಬಂದು ಜಗಳವಾಡಿದರೂ ನನ್ನದೇ ತಪ್ಪು ಎಂದು ಒಪ್ಪಿಕೊಂಡು ಸುಮ್ಮನಾಗುತ್ತಾರೆ. ಇವರು ನನ್ನ ಮುಂದೆ ಮಾತ್ರ ಈ ರೀತಿ ಮಾಡುತ್ತಾರಾ ಎಂಬುದನ್ನು ಪರೀಕ್ಷೆ ಮಾಡಿದೆ. ಆಗ ಇವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಿರುವುದು ತಿಳಿದು ಬಂದಿತು.

ಸಂಧರ್ಬಿಕ ಚಿತ್ರ

Also read: ಈ ಸುಂದರಿ ಬರೋಬರಿ 250 ಕ್ಕೊ ಹೆಚ್ಚು ಯುವಕರ ಜೊತೆಗೆ ಡೇಟಿಂಗ್ ಮಾಡಿ ಕೊನೆಗೆ ನಾಯಿಯನ್ನು ಮದುವೆಯಾದ ಮಾಡೆಲ್..

ಈ ಉಸಿರುಗಟ್ಟಿಸುವ ಪ್ರೀತಿಯಿಂದ ನನ್ನ ಜೀವನ ನರಕವಾಗಿದೆ. ಇದು ಪತ್ನಿಗೆ ಅತಿರೇಕ ವರ್ತನೆ ಎನಿಸಿದ್ದು, ಇಂತಹ ಪತಿಯಿಂದ ನನಗೆ ವಿಚ್ಛೇದನ ನೀಡಿ ಎಂದು ಅರಬ್​ ಸಂಯುಕ್ತ ಸಂಸ್ಥಾನದ ಶಾರ್ಜಾ ಕೋರ್ಟ್​ ಮೊರೆ ಹೋಗಿದ್ದಾಳೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ. ಒಟ್ಟಿನಲ್ಲಿ ಗಂಡ ಆದವರು ಹೆಂಡತಿಯರನ್ನು ಹೇಗೆ ನೋಡಿಕೊಂಡರೂ ಕೂಡ ಕಷ್ಟವಾಗಿ ಬಿಟ್ಟಿದೆ ಅನಿಸುತ್ತಿದೆ.. ಗಂಡ ಚೆನ್ನಾಗಿ ನೋಡಿಕೊಳ್ಳಲ್ಲ ಎಂದು ಗೋಳಾಡುವವರ ಈ ಮಧ್ಯೆ ಈ ಜೋಡಿ ಒಂಥರಾ ವಿಭಿನ್ನ ಅನಿಸದೇ ಇರದು. ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮದುವೆಯಾದ ಹೊಸದರಲ್ಲಿ ಇಂತಹ ತಪ್ಪುಗಳು ಆಗುವುದು ಸಹಜ ಇದನ್ನು ನೀವೆ ಬಗೆಹರಿಸಿಕೊಳ್ಳಿ ಇನ್ನೂ ಮದುವೆಯಾಗಿ ಒಂದು ವರ್ಷವಾಗಿದ್ದರಿಂದ ಮತ್ತು ಇದೊಂದು ಅಪರೂಪದ ಪ್ರಕರಣ ಇದನ್ನು ಡೈವರ್ಸ್ ಮಾಡಲು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಅದರಿಂದ ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಗಂಡದಿರು ಸ್ವಲ್ಪ ಯೋಚನೆ ಮಾಡುವ ಅವಶ್ಯವಾಗಿದೆ.