ಕಾಂಗ್ರೆಸ್-ಜೆಡಿಎಸ್ ವಿಕೆಟ್ ಗಳು ಕುಸಿಯುತ್ತಿವೆಯಾ? ಬಿಜೆಪಿಗೆ ಸಂಪೂರ್ಣ ಬಹುಮತ ಸಿಕ್ಕಿದೆಯಾ??

0
467

ಕಾಂಗ್ರೆಸ್-ಜೆಡಿಎಸ್ ನ ವಿಕೆಟ್ ಗಳು ಕುಸಿಯುತ್ತಿವೆ. ಎರಡೂ ಪಕ್ಷದ ಶಾಸಕರು ಕುರಿಗಳಂತೆ ವರ್ತಿಸುತ್ತಿದ್ದಾರೆ.  ಇತ್ತ ಬೆಜೆಪಿ ಅಧಿಕಾರದ ಗದ್ದುಗೆಗಾಗಿ ಏನು ಮಾಡಲು ಸಿದ್ದ ಎಂಬಂತೆ ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಲ್ಲಿ ಜಯ ಸಾಧಿಸಿದ ಕರ್ನಾಟಕ ಪ್ರಜ್ಞ್ಯಂತ ಜನತಾ ಪಾರ್ಟಿಯ ಏಕೈಕ ಶಾಸಕ ಆರ್. ಶಂಕರ್ ಅವರು ಬಿಜೆಪಿಯನ್ನು ಮೊದಲು ಬೆಂಬಲಿಸಿದರು, ನಂತರ ಕಾಂಗ್ರೆಸ್ ಗೆ ತೆರಳಿದರು. ಕೆಲವು ಗಂಟೆಗಳ ನಂತರ, ಅವರು ಬಿಜೆಪಿಯ ಪ್ರಕಾಶ್ ಜಾವಡೇಕರ್ ಅವರೊಂದಿಗೆ ಕಾಣಿಸಿಕೊಂಡಿದ್ದರು ಆದರೆ ಗುರುವಾರ ಬೆಳಿಗ್ಗೆ ಅವರು ವಿದಾನ ಸೌಧ ಸಂಕೀರ್ಣದಲ್ಲಿ ಗಾಂಧಿ ಪ್ರತಿಮೆಯ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಹೀಗೆ ಯಾಕೆ ಅತ್ತಿಂದಿತ್ತ ಓಡಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, “ಎರಡೂ ಪಕ್ಷಗಳಿಂದ ನನಗೆ ತುಂಬಾ ಒತ್ತಡವಿದೆ,” ಎಂದು ಶಂಕರ್ ಹೇಳಿದ್ದಾರೆ. ಒಟ್ನಲ್ಲಿ ಒಂದು ವಿಷಯವಂತೂ ಖಚಿತವಾಗಿದೆ. ಕೆಲವೇ ಚುನಾಯಿತ ಪ್ರತಿನಿಧಿಗಳು ಈ ಚುನಾವಣೆಯಿಂದಾಗಿ ಆಚ್ಚೇ ದಿನ್ ಅನ್ನು ಶೀಘ್ರದಲ್ಲೇ ನೋಡಲಿದ್ದಾರೆ. ‘ನಗದು ಆನ್ ಡೆಲಿವರಿ’ ಮೂಲಕ.

ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಲು ಆ ಪಕ್ಷಗಳ ಶಾಸಕರಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಾಸ ಮತಯಾಚನೆ ವೇಳೆ ‌ನಿಮ್ಮ ಊಹೆಗೂ ನಿಲುಕದಷ್ಟು ಸಂಖ್ಯೆಯಲ್ಲಿ ನಾವು ಗೆಲ್ಲುತ್ತೇವೆ’ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಶಾಸಕರ ಹಿಡಿತದಲ್ಲಿಟ್ಟುಕೊಳ್ಳುವ ಹೊಣೆಯನ್ನು ಹಿರಿಯ ಮುಖಂಡ ಶಾಮನೂರ ಶಿವಶಂಕರಪ್ಪ ಅವರಿಗೆ ನೀಡಲಾಗಿದೆ. ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿರುವ ಕಾಂಗ್ರೆಸ್ ಶಾಸಕರನ್ನು ವಿಶೇಷ ವಿಮಾನದ ಮೂಲಕ ಕೇರಳದ ಕೊಚ್ಚಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಕೆಲವು ಕಿರಿಯ ಮತ್ತು ಇತರ ಪಕ್ಷಗಳಿಂದ ವಲಸೆ ಬಂದು ಶಾಸಕರಾದವರಿಗೆ ಮೊಬೈಲ್ ಬಳಕೆಗೆ ನಿರ್ಬಂಧಿಸಲಾಗಿದೆ. ಸ್ಥಳಾಂತರವನ್ನು ಖಚಿತಪಡಿಸಿರುವ ಡಿ.ಕೆ. ಶಿವಕುಮಾರ್, ಎಲ್ಲಿಗೆ ಕರೆದೊಯ್ಯಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಿಲ್ಲ.

‘ನಮ್ಮ ಇಬ್ಬರು ಶಾಸಕರನ್ನು ಬಿಜೆಪಿಯವರು ಕೂಡಿಟ್ಟುಕೊಂಡಿದ್ದಾರೆ. ಅವರನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವುದೂ ಗೊತ್ತಿದೆ. ನಾನು ಮನಸ್ಸು ಮಾಡಿ
ದರೆ 24 ಗಂಟೆಯಲ್ಲಿ ಅವರನ್ನು ಕರೆದುಕೊಂಡು ಬರುತ್ತೇನೆ. ಒಂದು ವೇಳೆ ಅವರು ಹೋಗುವುದಾರೆ ರಾಜೀನಾಮೆ ಪಡೆದುಕೊಳ್ಳುತ್ತೇವೆ’ ಎಂದು ಶಿವಕುಮಾರ್‌ ತಿಳಿಸಿದರು.

‘ವಿಶ್ವಾಸ ಮತ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿರುವುದು ಯಡಿಯೂರಪ್ಪ ಅವರ ಭಂಡತನ. ಕಾಂಗ್ರೆಸ್‍ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ. ಆನಂದ್‍ ಸಿಂಗ್ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದಾರೆ. ಅವರು ವಾಪಸ್ ಬಂದೇ ಬರುತ್ತಾರೆ. ಪ್ರತಾಪ್ ಗೌಡ ಪಾಟೀಲ ಅನಾರೋಗ್ಯದಿಂದಿದ್ದಾರೆ. ಅವರು ಕಾಂಗ್ರೆಸ್‍ನಲ್ಲೇ ಇದ್ದಾರೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

‘ವಿಧಾನಸಭೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಮಾಡಿಲ್ಲ. ಆಗಲೇ  ಅಧಿಕಾರಿಗಳ ವರ್ಗಾವಣೆಗೆ ಕೈಹಾಕಿದ್ದಾರೆ. ಬಿಜೆಪಿಯವರು ನಮ್ಮ ಯಾವುದೇ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ. ನಮ್ಮ ಮೂವರು ಶಾಸಕರನ್ನು ಸೆಳೆದರೆ ನಾವು ಬಿಜೆಪಿಯ ಆರು ಶಾಸಕರನ್ನು ಸೆಳೆಯುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

‘ಕಾಂಗ್ರೆಸ್, ಜೆಡಿಎಸ್ ಶಾಸಕರ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೂಲಕ ಬಿಜೆಪಿ  ಒತ್ತಡ ಹೇರುತ್ತಿದೆ.ಈಗಾಗಲೇ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರಿಗೆ ಬೆದರಿಕೆಯೊಡ್ಡಿರುವ ಬಿಜೆಪಿ ಅವರನ್ನು ಹಿಡಿದಿಟ್ಟುಕೊಂಡಿದೆ’ ಎಂದೂ ಆರೋಪಿಸಿದರು.

ಬಿಜೆಪಿಗೆ ಅಗತ್ಯವಿರುವ ಸಂಖ್ಯೆಯ ಶಾಸಕರನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸೆಳೆಯುವ ಜವಾಬ್ದಾರಿಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಗಲಿಗೆ ನೀಡಲಾಗಿದೆ. ಯತ್ನಾಳಗೆ ಸಾಥ್‌ ನೀಡುವಂತೆ  ವೀರಣ್ಣ ಚರಂತಿಮಠ, ಉಮೇಶ ಕತ್ತಿ ಅವರಿಗೆ ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

‘ಕಾಂಗ್ರೆಸ್‌, ಜೆಡಿಎಸ್‌ನಿಂದ ಆಯ್ಕೆಯಾದ ಶಾಸಕರನ್ನು ವೈಯಕ್ತಿಕ ಸ್ನೇಹ ಬಳಸಿಕೊಂಡು ಸೆಳೆಯಿರಿ ಎಂಬ ಸೂಚನೆಯನ್ನು ಬಸನಗೌಡರಿಗೆ ನೀಡಲಾಗಿದೆ’ ಎಂದು ಯತ್ನಾಳ ಆಪ್ತರೊಬ್ಬರು ಹೇಳಿದ್ದಾರೆ. ‘ಪಕ್ಷದ ವರಿಷ್ಠರು ಸೂಚನೆ ನೀಡಿರುವುದು ನಿಜ. ನಾಲ್ಕೈದು ಶಾಸಕರ ಜತೆ ಮಾತುಕತೆ ನಡೆಯಲಿದೆ’ ಎಂದು ಯತ್ನಾಳ ಹೇಳಿದ್ದಾರೆ.