ನನಗೆ ಭಾರತವೆಂದರೆ ತುಂಬ ಇಷ್ಟ, ಭಾಗವತ್-ಗೀತೆಯಿಂದಲೇ ನಾನು ಸಂಪೂರ್ಣನಾಗಿರುವುದು ಎಂದರು ವಿಲ್ ಸ್ಮಿಥ್, ಏನಿದು ಅಚ್ಚರಿ ಅಂತೀರ ನೀವೇ ನೋಡಿ …

0
1132

ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶಿತ ಹಾಗು ಪ್ರಖ್ಯಾತ ಗ್ರಾಮಿ ಪ್ರಶಸ್ತಿ ವಿಜೇತ, ಜನಪ್ರಿಯ ಹಾಲಿವುಡ್ ನಟ ವಿಲ್ ಸ್ಮಿಥ್ ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದರು, ವಿಲ್ ಸ್ಮಿಥ್ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ ಆದರೆ ಈ ಬಾರಿಯ ಭೇಟಿಯಲ್ಲಿ ಅವರು ನಮ್ಮ ಹಿಂದೂ ಧರ್ಮದ ಕುರಿತು ಕೆಲ ಮಾತುಗಳನ್ನು ಆಡಿದ್ದಾರೆ, ಏನು ಅವು ಮುಂದೆ ಓದಿ.

ತಮ್ಮ ಮುಂಬರುವ “ಬ್ರೈಟ್” ಚಿತ್ರದ ಪ್ರಚಾರದ ಭಾಗವಾಗಿ ವಿಲ್ ಸ್ಮಿಥ್ ವಾಣಿಜ್ಯ ನಗರಿ ಮುಂಬೈಗೆ ಬಂದಿದ್ದರು, ಅವರು ತಮ್ಮ ಅಭಿಮಾನಿಗಳ ಜೊತೆ ಮಾತುಕತೆ, ಸೆಲ್ಫಿ ಮತ್ತು ಡಾನ್ಸ್ ಮೂಡಿಸಿದ ನಂತರ ತಮ್ಮ ಹಿಂದಿನ ಭಾರತದ ಭೇಟಿಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ನಾನು ಭಾರತಕ್ಕೆ 4 ಬಾರಿ ಬಂದಿದ್ದೇನೆ ಮತ್ತು ಮುಂಬೈಗೆ ಇದು ನನ್ನ ಮೂರನೇ ಭೇಟಿ, ನಾನು ಶೇಕಡ 90 ರಷ್ಟು ಪರಿಪೂರ್ಣ ನಾಗಿರುವುದು ಭಗವತ್ ಗೀತೆಯಿಂದ ಇನ್ನು ನನ್ನ ಒಳಗಿನ ಅರ್ಜುನನನ್ನು ಸಂಪರ್ಕಿಸುತ್ತಿದ್ದೇನೆ, ಭಗವತ್ ಗೀತೆ ಇನ್ನು ಕೆಲುವು ಅಧ್ಯಾಯಗಳನ್ನು ಓದುವುದು ಬಾಕಿ ಇದೆ, ಇದನ್ನು ಓದುವುದೆಂದರೆ ನನಗೆ ತುಂಬ ಇಷ್ಟ, ನನ್ನ ಮುಂದಿನ ಭೇಟಿಯಲ್ಲಿ ರಿಷಿಕೇಶಕ್ಕೆ ಹೋಗುವ ಹಂಬಲವಿದೆ ಎಂದರು.

ನನಗೆ ಭಾರತವೆಂದರೆ ತುಂಬ ಇಷ್ಟ ಇಲ್ಲಿಯ ಜನ, ಸಂಸ್ಕೃತಿ ಮತ್ತು ಆಹಾರ ಪದ್ದತಿಗಳು ನನಗೆ ಅದ್ಭುತ ಎನಿಸುತ್ತದೆ, ಕಳೆದ ಬಾರಿ ಬಂದಾಗ ನಟ ಅಕ್ಷಯ್ ಕುಮಾರ್ ಅವರ ಮನೆಯಲ್ಲಿ ಭಾರತೀಯ ಊಟದ ರುಚಿಯನ್ನು ಸವಿದ್ದಿದ್ದೆ ಅದು ನಾನು ಜೀವನದಲ್ಲಿ ಮಾಡಿದ ಅತ್ಯಂತ ಸ್ವಾದಿಷ್ಟಕರ ಭೋಜನ, ಅದನ್ನು ನಾನು ಎಂದು ಮರೆಯುವುದಿಲ್ಲ ಎಂದರು.

ಒಟ್ಟಿನಲ್ಲಿ ನಮ್ಮ ಜನರೆ ಮರೆಯುತ್ತಿರುವ ನಮ್ಮ ಸಂಸ್ಕೃತಿಯನ್ನು ವಿದೇಶಿಗನಾದರು ಪಾಲಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ, ಇನ್ನಾದರು ನಾವು ನಮ್ಮತನವನ್ನು ಉಳಿಸಿ ಬೆಳೆಸೋಣ…!