ಈ ೧೦ ಸ್ಥಳಗಳು ಚಳಿಗಾಲದಲ್ಲಿ ತುಂಬಾ ರಮಣೀಯ!!!

0
3777

1. ಸೋನಾಮಾರ್ಗ್
ಹಿಮಾಚ್ಛಾದಿತ ಪರ್ವತಗಳು, ಸುಂದರ ಕಣಿವೆಗಳ ವೀಕ್ಷಣೆಗಾಗಿ ಕಾಶ್ಮೀರಕ್ಕೆ ಹೋಗಬೇಕು. ಕಾಶ್ಮೀರದ ಚಿನ್ನದ ಬೀಡು ಎಂದೇ ಕರೆಯಲ್ಪಡುವ ಸೋನಾಮಾರ್ಗ್‍ಗೆ ಹೋಗಿ ಪ್ರಕೃತಿಯ ಅದ್ಭುತ ಸವಿಯಿರಿ.

Image result for sonamarg

2. ಧರಮ್ ಶಾಲಾ
ಹಿಮಾಲಯದ ಸಮೀಪ ಇರುವ ಈ ಸ್ಥಳ ಉಸಿರು ಬಿಗಿಹಿಡಿದು ನೋಡಬೇಕಾದ ಅದ್ಭುತ ಸ್ಥಳ. ಚಳಿಗಾಲದಲ್ಲಿ ಪ್ರವಾಸಿಗರು ಕಡಿಮೆ ಇರುವುದರಿಂದ ಸಾವಕಾಶ ವೀಕ್ಷಣೆಗೆ ಅವಕಾಶ ಇರುತ್ತದೆ.

Image result for dharam shala

3. ಮನಾಲಿ
ಚಳಿಗಾಲದ ಪ್ರವಾಸವನ್ನು ಕುಲು ಮನಾಲಿ ಸ್ಮರಣೀಯವಾಗಿಸುತ್ತವೆ. ಇಲ್ಲಿನ ಪುರಾತನ ದೇವಾಲಯಗಳು ಕಣ್ಮನ ತಣಿಸುತ್ತವೆ.

4. ವಯನಾಡ್
ದಕ್ಷಿಣ ಭಾರತದಲ್ಲಿ ಮೊದಲು ಕೇರಳಕ್ಕೆ ಬನ್ನಿ. ವಯನಾಡಿನ ಹಿನ್ನೀರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಹಲವಾರು ಸಾಹಸ ಕ್ರೀಡೆಗಳು, ನೋಡಬೇಕಾದ ಗುಹೆ, ಶಿಖರಗಳಿವೆ.

Image result for wayanad

5. ಲಕ್ಷದ್ವೀಪ
ನೀಲಾಕಾಶ-ನೀಲಸಮುದ್ರದ ಸಂಗಮ ನೋಡಲು ಲಕ್ಷದ್ವೀಪಕ್ಕೆ ಬರಬೇಕು. ಬಿಸಿಲಿನ ಬೇಗೆ ತಡೆಯುವುದು ಕಷ್ಟವಾದ್ದರಿಂದ ಚಳಿಗಾಲದಲ್ಲಿ ಅಲ್ಲಿಗೆ ಪ್ರವಾಸ ಹೋಗುವುದೇ ರೋಚಕ ಅನುಭವ.

Image result for lakshadweep

6. ಕೊಡಗು
ಕರ್ನಾಟಕದ ಸುಂದರ ಕೊಡಗಿನ ಬೆಟ್ಟಗುಡ್ಡಗಳ ಸಾಲು, ಆಹ್ಲಾದಕರ ವಾತಾವರಣ ಚಳಿಗಾಲದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

Image result for coorg

7. ಹಾಫ್‍ಲಾಂಗ್
ಬೇಸಿಗೆಗಿಂತ ಚಳಿಗಾಲದಲ್ಲಿ ಈ ಸ್ಥಳಕ್ಕೆ ಹೋಗುವುದು ಸರಿ. ಇಲ್ಲಿನ ಟೀ ತೋಟಗಳ ವಿಹಂಗಮ ನೋಟ, ಮಂಜುಕವಿದ ಮುಂಜಾನೆಯ ಸುಂದರ ನೋಟ ಮನಕ್ಕೆ ಮುದ ನೀಡುತ್ತದೆ.

haflong

8. ಶಿಲ್ಲಾಂಗ್
ಮೇಘಾಲಯಕ್ಕೆ ಹೋದರೆ ಮರೆಯದೆ ಭೇಟಿ ನೀಡಬೇಕಾದ ಸ್ಥಳ ಇದು. ಸಾಹಸ ಕ್ರೀಡೆಗಳ ತವರಾಗಿರುವ ಈ ಸ್ಥಳ ಚಳಿಗಾಲದಲ್ಲಂತೂ ರಮ್ಯ ಮನೋಹರ. ಇಲ್ಲಿ ತೇಲುವ ರೆಸ್ಟಾರೆಂಟ್‍ಗಳು, ಬೆಟ್ಟಗುಡ್ಡಗಳು ಇವೆ.

Image result for shillong

9. ರಾನ್ ಆಫ್ ಕಚ್
ಹುಣ್ಣಿಮೆಯ ರಾತ್ರಿಯಲ್ಲಿ ಶ್ವೇತ ಮರಳುಗಾಡಿನ ಈ ನಗರವನ್ನು ನೋಡುವುದೇ ಹಬ್ಬ. ಬೆಳದಿಂಗಳಲ್ಲಿ ಇಲ್ಲಿ ನಡೆಯುವ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳ ಸೊಬಗು ಸವಿಯಬಹುದು.

Image result for rann of kutch

10. ಜೈಸಲ್ಮೇರ್
ವರ್ಣಮಯ ಪ್ರವಾಸಿ ತಾಣಗಳು ಇಲ್ಲಿವೆ.ಮರಳಿನ ರಾಶಿಯಲ್ಲಿ ಮಿಂದಂತೆ ಕಾಣುವ ಕಟ್ಟಡಗಳಿವೆ. ಸುಂದರ ವಾಸ್ತುಶಿಲ್ಪದ ಅರಮನೆಗಳಿವೆ. ಇವುಗಳ ವೀಕ್ಷಣೆ ರಾಜಪ್ರಭುತ್ವದ ದಿನಗಳನ್ನು ನೆನಪಿಸುತ್ತವೆ.