ಜನ ಸಾಮಾನ್ಯರಂತೆ ರೈಲಿನಲ್ಲಿ ಬಂದ ಮಹರಾಜ ಯದುವೀರ್ ಒಡೆಯರ್ ಹಾಗೂ ತುಂಬು ಗರ್ಭಿಣಿ ಮಹರಾಣಿ ತ್ರಿಶಿಕಾ ಕುಮಾರಿ

0
920

ಗಂಡ, ಹೆಂಡತಿಯನ್ನು ದೂರದೂರಿಗೆ ಕರೆದಾಗ, ಅಯ್ಯೊ ಟ್ರೇನ್ ನಲ್ಲಿ ಹೋಗೋದ?? ಆಗಲ್ಲಪ, ಕಾರ್ ಮಾಡಿ ಹೋಗೋಣ ಎನ್ನುವ ಕಾಲವಿದು. ಆದರೆ ಮೈಸೂರಿನ ರಾಜ ದಂಪತಿ ನೆನ್ನೆ ಬೆಂಗಳೂರಿನಿಂದ ಮೈಸೂರಿಗೆ ಟ್ರೇನ್ ನಲ್ಲಿ ಬರುವ ಮೂಲಕ ತಮ್ಮ ಸರಳತೆಯನ್ನು ಮೆರೆದಿದ್ದಾರೆ.

ಕಾರಣವೇನೆಂದರೆ ಮಹರಾಣಿ ತ್ರಿಶಿಕಾ ರವರು ತುಂಬು ಗರ್ಭಿಣಿ, ವರುಷದ ಹಿಂದಷ್ಟೇ ಮದುವೆಯಾಗಿದ್ದ ಮೈಸೂರಿನ ರಾಜರಿಗೆ ಸದ್ಯದಲ್ಲೇ ತಂದೆಯ ಪಟ್ಟವೂ ದೊರೆಯಲಿದೆ. ಮಹರಾಣಿಯವರು ತುಂಬು ಗರ್ಭಿಣಿ ಯಾದ್ದರಿಂದ ಕಾರಿನ ಪ್ರಯಾಣ ಸರಾಗವಲ್ಲವೆಂದು ರೈಲಿನಲ್ಲಿ ಬಂದು, ನಿಲ್ದಾಣದಲ್ಲಿ ಇದ್ದ ಜನ ಸಾಮಾನ್ಯರಿಗೆ ಅಚ್ಚರಿ ಮೂಡಿಸಿದ್ದಾರೆ. ಅಲ್ಲಿ ನೆರೆದಿದ್ದ ಹಲವಾರು ಹೆಂಗಸರು ಹೇ ಅಲ್ನೋಡು ನಮ್ಮ ರಾಜರ ಹೆಂಡತಿ ತುಂಬಿದ ಬಸರಿ ಅಂತ ಮಾತನಾಡಿಕೊಳೂತ್ತಿದ್ದದ್ದು.. ಕೆಲವರು ಕೈ ಮುಗಿದು ನಮಸ್ಕಾರ ಮಾಡುತ್ತಿದ್ದದ್ದು ಕಂಡು ಬಂದಿತು.

ಮೈಸೂರಿನ ರಾಜ ಮನೆತನಕ್ಕೆ ಅಲಮೇಲಮ್ಮನ ಶಾಪವೂ ಬೇರೆ ಇದೆ, ಒಂದು ತಲೆಮಾರಿಗೆ ಮಗುವಾದರೆ ಇನ್ನೊಂದು ತಲೆಮಾರಿಗೆ ಮಗುವಾಗುವುದಿಲ್ಲ, ಇದು ಹಾಗೇ ನಡೆದುಕೊಂಡು ಬರುತ್ತಿರುವುದು ಶಾಪಕ್ಕೆ ಪುಷ್ಟಿ ಕೊಟ್ಟಂತಿದೆ, ಹೀಗಿರುವಾಗ ಮುಂಜಾಗ್ರತೆ ಒಳ್ಳೆಯದೆಂದು ರಾಜ ದಂಪತಿ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದು ತಮ್ಮ ಕಾರಿನಲ್ಲಿ ಅರಮನೆಯಲ್ಲಿರುವ ತಮ್ಮ ಖಾಸಗಿ ನಿವಾಸಕ್ಕೆ ತೆರಳಿದ್ರು. ಸುಸೂತ್ರವಾಗಿ ಹೆರಿಗೆಯಾಗಲಿ ಎಂದು ಹಾರೈಸೋಣ. ನಮ್ಮ ರಾಜ ದಂಪತಿಗಳಿಗೆ ಶುಭವಾಗಲಿ..