ಪತ್ನಿಯನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಟಾಯ್ಲೆಟ್ನಲ್ಲಿ ಬಂಧಿಸಿದ್ದ ಪತಿ..!

0
384

ಶೌಚಾಲಯದಲ್ಲಿ ಪತಿಯಿಂದಲೇ ವರ್ಷದಿಂದ ಕೂಡಿಹಾಕಿದ್ದ ಮಹಿಳೆಯನ್ನು ಮಹಿಳಾ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿಗಳ ತಂಡ ರಕ್ಷಿಸಿದ ಘಟನೆ ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ರಿಶ್ಪುರ್ ಗ್ರಾಮದಲ್ಲಿ ನಡೆದಿದೆ.

ಮಹಿಳೆಯರ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿ ರಜನಿ ಗುಪ್ತಾ ಎಎನ್ ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿ, ಮಾಹಿತಿ ಸಿಕ್ಕಿದ ಕೂಡಲೇ ನಮ್ಮ ತಂಡ ಗ್ರಾಮಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ. ಒಂದು ವರ್ಷದಿಂದ ಮಹಿಳೆಯೊಬ್ಬರನ್ನು ಶೌಚಾಲಯದಲ್ಲಿ ಕೂಡಿಹಾಕಲಾಗಿದೆ ಎಂಬ ಮಾಹಿತಿ ನನಗೆ ಸಿಕ್ಕಿತು. ಇಲ್ಲಿಗೆ ನಮ್ಮ ತಂಡದ ಜೊತೆಗೆ ಬಂದೆನು. ನಾವಿಲ್ಲಿಗೆ ಬಂದು ನೋಡಿದಾಗ ಸುದ್ದಿ ನಿಜವೆಂದು ತಿಳಿದು ಆಘಾತವಾಯಿತು. ಹಲವು ದಿನಗಳಿಂದ ಮಹಿಳೆ ಏನೂ ತಿಂದಿರಲಿಲ್ಲ ಎಂದು ರಜನಿ ಗುಪ್ತಾ ತಿಳಿಸಿದ್ದಾರೆ.

ಮಹಿಳೆ ಮಾನಸಿಕ ಅಸ್ವಸ್ಥತೆ ಎಂದು ಹೇಳುತ್ತಿದ್ದಾರೆ, ಆದರೆ ಅದು ಸುಳ್ಳು.ನಾವು ಆಕೆಯನ್ನು ಮಾತನಾಡಿಸಿದಾಗ ನಮಗೆ ಹಾಗೆ ಅನ್ನಿಸಲಿಲ್ಲ. ಹಾಗಾಗಿ ಆಕೆ ಅಸ್ವಸ್ಥೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಶೌಚಾಲಯದೊಳಗೆ ಆಕೆಯನ್ನು ಕೂಡಿ ಹಾಕಲಾಗಿತ್ತು. ನಾವು ರಕ್ಷಿಸಿ ಆಕೆಯ ತಲೆಗೂದಲು ತೊಳೆದೆವು. ಪೊಲೀಸ್ ದೂರು ದಾಖಲಿಸಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಮಹಿಳೆಯ ಪತಿ, ಆಕೆ ಮಾನಸಿಕ ಅಸ್ವಸ್ಥತೆ, ಹೊರಗೆ ಕುಳಿತುಕೊಳ್ಳು ಎಂದು ನಾವು ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ವೈದ್ಯರ ಬಳಿಗೆ ಹೋಗಿ ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ.

ಮಹಿಳೆಗೆ ಮೂರು ಮಕ್ಕಳಿದ್ದು, ಆಕೆಯನ್ನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಶೌಚಾಲಯದಿಂದ ಮುಕ್ತಗೊಳಿಸಿದ್ದಾರೆ. ಮಹಿಳೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಮಹಿಳೆಯನ್ನ ಸಂಬಂಧಿಕರ ವಶಕ್ಕೆ ನೀಡಲಾಗಿದೆ. ಪತಿ ನರೇಶ್ ಕುಮಾರ್ ನಿಂದ ಮಹಿಳೆ ಟಾಯ್ಲೆಟ್ ನಲ್ಲಿ ಬಂಧಿಯಾಗಿರುವ ವಿಷಯ ತಿಳಿದ ಜಿಲ್ಲಾ ಮಹಿಳಾ ರಕ್ಷಣಾ ಅಧಿಕಾರಿ ರಜಿನಿ ಗುಪ್ತಾ ಪೊಲೀಸರ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದರು. ಪುಟ್ಟದಾದ ಟಾಯ್ಲೆಟ್ ನಲ್ಲಿ ಮಹಿಳೆ ಇರೋದು ಗಮನಕ್ಕೆ ಬಂದಿದೆ.

ಮಹಿಳೆಗೆ 17 ವರ್ಷದ ಹಿಂದೆ ನರೇಶ್ ಕುಮಾರ್ ಎಂಬಾತನ ಜೊತೆ ಮದುವೆಯಾಗಿತ್ತು. ಮಹಿಳೆಗೆ 15 ವರ್ಷದ ಮಗಳು ಮತ್ತು 11, 13 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಪತ್ನಿ ಮಾನಸಿಕ ಅಸ್ವಸ್ಥ ಹಿನ್ನೆಲೆ ಆಕೆಯನ್ನ ಬಂಧನದಲ್ಲಿರಿಸಲಾಗಿತ್ತು ಎಂದು ನರೇಶ್ ಕುಮಾರ್ ಹೇಳಿದ್ದಾನೆ. ಆದ್ರೆ ಮಹಿಳೆ ತನ್ನ ಸಂಬಂಧಿಕರು ಮತ್ತು ಮಕ್ಕಳನ್ನ ಗುರುತಿಸಿದ್ದಾಳೆ. ಹಾಗೆ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದ್ದಾರೆ. ಪತ್ನಿ ಮಾನಸಿಕ ಸ್ಥಿತಿಗತಿ ಸರಿಯಾಗಿಲ್ಲ ಎಂಬುದರ ಕುರಿತು ನರೇಶ್ ಕುಮಾರ್ ಯಾವುದೇ ದಾಖಲೆಗಳನ್ನ ನೀಡಿಲ್ಲ.

ಸದ್ಯ ಮಹಿಳೆ ಪತಿ ನರೇಶ್ ಕುಮಾರ್ ವಿರುದ್ಧ ಸೆಕ್ಷನ್ 498 (ಎ) ಮತ್ತು 342 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯ ಪತಿಯನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸನೋಲಿ ಪೊಲೀಸ್ ಠಾಣೆಯ ಇನ್ಚಾರ್ಜ್ ಸುರೇಂದ್ರ ದಹಿಯಾ ಹೇಳಿದ್ದಾರೆ.

Also read: ಮುಂದಿನ ವರ್ಷ ಕರೋನ ಲಸಿಕೆಗಳು ಬರುತ್ತವೆಯಂತೆ, ಧೈರ್ಯದಿಂದ ನೀವು ಅದನ್ನು ತೆಗೆದುಕೊಳ್ಳುತ್ತೀರ??