ಉದ್ಯೋಗ ಮಾಡುವ ಮಹಿಳೆಯರು ತಿಳಿದಿರಬೇಕಾದ 5 ಸಂಗತಿಗಳು

0
1222

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಉದ್ಯೋಗ ಮಾಡುವುದು ಸರ್ವೇ ಸಾಮಾನ್ಯ.. ಆದರೆ ಆ ಮನೆಗಳಲ್ಲಿ ಕಿರಿಕಿರಿ ತಪ್ಪಿದ್ದಲ್ಲ ಅದಕ್ಕಾಗಿಯೇ ಈ ಸಲಹೆಗಳನ್ನು ಪಾಲಿಸಿ.. ನೆಮ್ಮದಿಯಿಂದ ಕೆಲಸ ಮಾಡಿ..

1.ಗಂಡ ಮಕ್ಕಳಿಗಾಗಿ ಟೈಮ್ ಕೊಡಿ
ಸಾಮಾನ್ಯವಾಗಿ ಸಂಸಾರದಲ್ಲಿ ಜಗಳ ಬರುವುದೇ ಈ ವಿಷಯಕ್ಕಾಗಿ.. ಮಕ್ಕಳು ಏಕಾಂಗಿತನದಲ್ಲಿ ಇದ್ದಾಗ ಅಥವ ಗಂಡನ ಜೊತೆ ಟೈಮ್ ಕಳೆಯದೇ ಇದ್ದಾಗ.. ಕೆಲಸಕ್ಕೆ ಹೋಗುವುದರಿಂದ ಈ ತೊಂದರೇ ಎಂದು ಮನೆಯವರು ಭಾವಿಸುತ್ತಾರೆ ಅದಕ್ಕಾಗಿಯೇ ಅವರಿಗಾಗಿ ನಿಮ್ಮ ಕೆಲ ಸಮಯ ಮೀಸಲಿಡಿ..

2.ಆಫೀಸ್ ಹಾಗೂ ಮನೆಯ ಕೆಲಸದ ಟೈಮ್ ಟೇಬಲ್ ತಾಯಾರಿ ಮಾಡಿಕೊಳ್ಳಿ
ಮನೆ ಕೆಲಸ ಸರಿಯಾಗಿ ನಿರ್ವಹಣೆ ಯಾದರೆ ಅರ್ಧ ತಲೆ ನೋವು ತಪ್ಪುತ್ತದೆ.. ಆಫೀಸ್ ಹಾಗೂ ಮನೆ ಕೆಲಸವನ್ನು ಕಲಸಬೇಡಿ.. ಅದಕ್ಕಾಗಿಯೇ ಪ್ರತ್ಯೇಕ ಟೈಮ್ ಟೇಬಲ್ ಮಾಡಿಕೊಂಡು ನಿರ್ವಹಿಸಿ..

 

3.ಮನೆಯವರ ಮುಂದೆ ಅಹಂಕಾರ ಭಾವನೆ ಬೇಡ
ನಾನೂ ದುಡಿಯುತ್ತಿರುವೆ ಎಂದು ಮನೆಯವರ ಮುಂದೆ ಎಂದಿಗೂ ಅಹಂಕಾರ ಭಾವ ತೋರಿಸಬೇಡಿ.. ಇದರಿಂದ ನಿಮ್ಮ ಕೆಲಸಕ್ಕೆ ಮುಳ್ಳಾಗುವುದು ಖಂಡಿತ..

4.ಮನೆಯ ಜವಬ್ದಾರಿ ನಿರ್ವಹಣೆಯಲ್ಲಿ ಗಂಡನಿಗೆ ಸಹಾಯ ಮಾಡಿ
ಹೌದು ಮನೆ ನಿರ್ವಹಣೆ ವಿಚಾರದಲ್ಲಿ ನಿಮ್ಮ ಕೈಲಾದಷ್ಟು ಗಂಡನಿಗೆ ಸಹಾಯ ಮಾಡಿ ಆಗ ಅವರಿಗೂ ನಿಮ್ಮ ಮೇಲೆ ಗೌರವ ಭಾವನೆ ಮೂಡುವುದು..

5.ಹಬ್ಬ ಹರಿದಿನಗಳನ್ನು ಅಚ್ಚು ಕಟ್ಟಾಗಿ ಮಾಡಿ..
ಕೆಲಸಕ್ಕೆ ಹೋಗುವವರು ಸಾಮಾನ್ಯವಾಗಿ ಹಬ್ಬಗಳನ್ನು ಸರಿಯಾಗಿ ಮಾಡುವುದಿಲ್ಲ.. ಇದರಿಂದ ಮನೆಯವರ ಮನಸ್ಸಿಗೆ ಬೇಸರ ವಾಗಬಹುದು.. ಕೆಲಸಕ್ಕೆ ಹೋಗುವುದರಿಂದ ಈ ರೀತಿಯಾಗುತ್ತಿದೆ ಎಂಬ ಮಾತುಗಳು ಬಂದರೂ ಬರಬಹುದು.. ಅದಕ್ಕಾಗಿಯೇ ಹಬ್ಬಗಳನ್ನು ಯಾವುದೇ ಕೊರತೆ ಇಲ್ಲದ ಹಾಗೆ ಮಾಡಿ..

ಮನೆಯವರನ್ನು ಸಂತೋಷದಿಂದಿರಿಸಿg. ನೀವು ನಿಮ್ಮ ಕೆರಿಯರ್ ಜೀವನ ಮುಂದುವರೆಸಿ.. ಶುಭವಾಗಲಿ ಶೇರ್ ಮಾಡಿ ಮಾಹಿತಿ ಹಂಚಿ..