ಶಿಯೋಮಿ ಫೋನ್ ಬಳಕೆದಾರರೆ ಎಚ್ಚರ, ಮತ್ತೊಂದು ಶಿಯೋಮಿ ಫೋನ್ ಸ್ಫೋಟಗೊಂಡಿದೆ..

0
701

ಈಗಿನ ಕಾಲದಲ್ಲಿ ಮೊಬೈಲ್ ಯಾರ ಬಳಿ ಇಲ್ಲ ಹೇಳಿ? ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ-ಅಜ್ಜಿಯ ಬಳಿಯೂ ಇರುವ ಒಂದು ಸಾಮಾನ್ಯ ಸಾಧನವೆಂದರೆ ಅದು ಮೊಬೈಲ್. ಇನ್ನು ಕೆಲವರಂತೂ ಊಟ ಬಿಡಬಹುದು, ಆದರೆ ಮೊಬೈಲ್ ಬಿಡಲಾಗದು ಎನ್ನುತ್ತಾರೆ. ಇಂತವರಿಗಾಗಿಯೇ ಇಲ್ಲಿ ಒಂದು ಎಚ್ಚರಿಕೆಯ ಸಂದೇಶವಿದೆ, ಏನದು ಮುಂದೆ ಓದಿ.

ಈಗ ಆನ್ಲೈನ್ ಶಾಪಿಂಗ್ ಒಂದು ಸಾಮಾನ್ಯ ಸಂಗಾತಿಯಾಗಿಬಿಟ್ಟಿದೆ, ಅದರಲ್ಲೂ ಆನ್ಲೈನ್-ನಲ್ಲಿ ಮೊಬೈಲ್ ಕೊಳ್ಳುವವರ ಸಂಖ್ಯೆ ಅತಿ ಹೆಚ್ಚು. ಹೀಗೆ ಕೊಪ್ಪಳ ಜಿಲ್ಲೆಯ ನಿವಾಸಿಯಾದ, ರೈಸ್ ಮಿಲ್ ಉದ್ಯೋಗಿ ಮೇಲಪ್ಪ ಕುಂದರಗಿ ಅವರು ಆನ್ಲೈನ್ ಮುಖಂತರ ಖರೀದಿಸಿದ್ದ ಶಿಯೋಮಿ (MI) ನೋಟ್ 4 ಮೊಬೈಲ್ ಸ್ಪೋಟಗೊಂಡಿದೆ.

ಹೌದು, ಮದ್ಯಾಹ್ನದ ಊಟಕ್ಕೆಂದು ಮನೆಗೆ ಬಂದಿದ್ದ ಮೇಲಪ್ಪ ಕುಂದರಗಿ ಅವರ ಶಿಯೋಮಿ ನೋಟ್ 4 ಮೊಬೈಲ್ ಸ್ಪೋಟಗೊಂಡಿದೆ. ಅದೃಷ್ಟವಶಾತ್, ಊಟಮಾಡುವಾಗ ಅವರು ಮೊಬೈಲ್ ಅನ್ನು ಪಕ್ಕದಲ್ಲಿಟ್ಟು ಕೊಂಡ್ದಿದರಿಂದ, ಅವರಿಗೆ ಯಾವುದೇ ಹಾನಿ ಆಗಿಲ್ಲ.

ಇನ್ನು ಈ ವೇಳೆ ಗಾಬರಿಗೊಂಡ ಮನೆಯವರು, ಒಂದು ವೇಳೆ ಮೊಬೈಲ್ ಜೇಬಿನೊಳಗಿದ್ದರೆ ಎಂತಹ ಅನಾಹುತ ಸಂಭವಿಸುತ್ತಿತ್ತು ಎಂದರು. ಅವರ ಮನೆಯವರು ಹೇಳಿಕೆಯ ಪ್ರಕಾರ ಮೇಲಪ್ಪ ಕುಂದರಗಿ ಅವರು ಈ ಶಿಯೋಮಿ (MI) ನೋಟ್ 4 ಮೊಬೈಲ್ ಅನ್ನು ಕಳೆದ 2017 ರ, ಅಕ್ಟೋಬರ್ 6 ರಂದು ಆನ್ಲೈನ್-ನಲ್ಲಿ ಖರೀದಿಸಿದ್ದರಂತೆ.