ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬವನ್ನು, ಅವರ ಅಭಿಮಾನಿಗಳು ಹೇಗೆ ಆಚರಿಸಿದರು ಗೊತ್ತಾ?

0
1349

ಇಂದು ಮಂಡ್ಯದ ಹುಡುಗ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಯಶ್ ಅವರ ಜನ್ಮ ದಿನವನ್ನು ಅವರ ಮನೆಯವರು ಮತ್ತು ರಾಜ್ಯದಲ್ಲಿರುವ ಯಶ್ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಯಶ್ ಅವರದ್ದೇ ಹವಾ, ಕೇಕ್ ಕತ್ತರಿಸಿ, ಸಿಹಿ ಹಂಚಿ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸುತ್ತಿದ್ದಾರೆ.

ಸ್ಯಾಂಡಲ್-ವುಡ್ ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್, ಬೆಂಗಳೂರಿನ ಹೊಸಕರೆಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಯಶ್‌ ತಮ್ಮ ಕುಟುಂಬದವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಯಶ್ ಅವರ 32 ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಅವರ ಅಭಿಮಾನಿಗಳು ಚಳಿಯನ್ನು ಲೆಕ್ಕಿಸದೆ ಬೆಳಗಿನಿಂದ ಅವರ ಮನೆ ಮುಂದೆ ಕಾಯುತ್ತಿದ್ದಾರೆ.

ಅಭಿಮಾನಿಗಳನ್ನು ನಿಯಂತ್ರಿಸಲೆಂದೇ ಪೊಲೀಸ್ ಇಲಾಖೆ ಸಾಕಷ್ಟು ಬಂದೋಬಸ್ತ್ ಒದಗಿಸಿದೆ. ಇನ್ನು ಯಶ್ ಪತ್ನಿ ನಟಿ ರಾಧಿಕಾ, ಯಶ್‌ಗೆ ಕೇಕ್‌ ತಿನ್ನಿಸಿ ಶುಭಾಶಯ ಕೋರಿದರು. ಯಶ್‌ ಕೂಡಾ ರಾಧಿಕಾ ಅವರಿಗೆ ಕೇಕ್‌ ತಿನ್ನಿಸಿ ಸಂಭ್ರಮಿಸಿದರು. ಇನ್ನು ನಿರ್ಮಾಪಕ ಜಯಣ್ಣ ಭೋಗೇಂದ್ರ ಬೆಳ್ಳಿ ಖಡ್ಗ ನೀಡಿ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಯಶ್ ಅವರು ಕೇವಲ ಚಿತ್ರರಂಗಕ್ಕೆ ಸೀಮಿತವಾಗದೆ ತಮ್ಮನ್ನು ತಾವು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೊದಲು ಯಶ್ ಅವರು ಯಶೋಮಾರ್ಗ ಎಂಬ ಟ್ರಸ್ಟ್ ಸ್ಥಾಪಿಸಿ ತಮ್ಮ ಸ್ವಂತ ಕಾಸಿನಲ್ಲಿ, ಸರ್ಕಾರದಿಂದ ಯಾವುದೇ ರೀತಿಯ ಸಾಹಯ ಪಡೆಯದೆ ಕೊಪ್ಪಳ ಜಿಲ್ಲೆಯ ಸುತ್ತಮುತ್ತಲು ಬತ್ತಿ ಹೋದ ಕೆರೆಗಳ ಜೀರ್ಣೋದ್ಧಾರಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಯೋಜನೆ ನಿರ್ಮಿಸಿದ್ದರು, ಇವರ ಈ ಕಾರ್ಯಕ್ಕೆ ರೈತರಿಂದ ಹಾಗು ರಾಜ್ಯದೆಲ್ಲೆಡೆಯಿಂದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇನ್ನು ಯಶ್ ಹುಟ್ಟುಹಬ್ಬ ಅಂದರೆ ಏನಾದರು ವಿಶೇಷ ಇರಲೇ ಬೇಕಲ್ಲವೇ. ತಮ್ಮ ಅಭಿಮಾನಿಗಳನ್ನು ಯಾವಾಗಲು ಖುಷಿ ಪಡಿಸಲು ಇಚ್ಚಿಸುವ ಯಶ್, ತಮ್ಮ ಬಹು ನಿರೀಕ್ಷಿತ ಚಿತ್ರವಾದ “KGF ” ನ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದರು.