ಋಗ್ವೇದದಲ್ಲಿ ಮತ್ತು ಕಠೋಪನಿಷತ್‍ನಲ್ಲಿಯೂ ಯೋಗದ ಬಗ್ಗೆ ಏನ್ ಹೇಳಿದ್ದಾರೆ ತಿಳ್ಕೊಳಿ.

0
2545

ಮಾನವನ ದೇಹಕ್ಕೆ ಯೋಗ ಅನ್ನೋದು ತುಂಬ ಮುಖ್ಯವಾದ ಅಂಶವಾಗಿದೆ ಒನ್ನು ಈ ಯೋಗದ ಇತಿಹಾಸ ಕೆದಕಿದಾಗ ಹಲವು ಅಂಶಗಳು ಬೆಳಕಿಗೆ ಬಂದಿವೆ. ಯೋಗ ಹುಟ್ಟಿದ್ದು ಎಲ್ಲಿ ಯೋಗ ಅಂದ್ರೆ ಋಗ್ವೇದದಲ್ಲಿ ಏನು ಹೇಳಲಾಗಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬದುಕಲು ದೇಹವನ್ನು ಹುರಿಗಟ್ಟಿಸಿ ಸಿಕ್ಸ್ ಪ್ಯಾಕ್ ಮಾಡುತ್ತೇವೆನ್ನುವ ಥರಾನುಥರ ಔಷಧಿಗಳು, ಪಾನೀಯಗಳು ಮಾರುಕಟ್ಟೆಯಲ್ಲಿ ಬಂದಿರುವಾಗ ಅವೆಲ್ಲವನ್ನು ಮೆಟ್ಟಿ ನಿಂತು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆಯುತ್ತಿರುವ ಯೋಗಕ್ಕೆ ಮಾನ್ಯತೆ ಬಂದಿರುವುದನ್ನು ಯೋಗಾಯೋಗವೆನ್ನಲೇಬೇಕಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೆಪ್ಟೆಂಬರ್ 27, 2014 ರಲ್ಲಿ ಯೋಗದ ಮಹತ್ವದ ಬಗ್ಗೆ ಹೇಳತೊಡಗಿದ್ದಂತೆ ವಿಶ್ವಸಂಸ್ಥೆಯು ಜೂನ್ 21 ಅನ್ನು `ಅಂತಾರಾಷ್ಟ್ರೀಯ ಯೋಗ ದಿನ’ ಎಂದು ಮಾನ್ಯತೆ ನೀಡಲಾಗಿದೆ.

Image result for yoga

ಯೋಗ ಎನ್ನುವ ಪದದ ಮೊದಲ ಉಲ್ಲೇಖ ಋಗ್ವೇದದಲ್ಲಿ ಕಾಣುತ್ತದೆ.
ಕಠೋಪನಿಷತ್‍ನಲ್ಲಿ ಯೋಗ ಎನ್ನುವ ಪದ ದೇಹ, ಮನಸ್ಸು ಮತ್ತು ಬುದ್ಧಿಗಳನ್ನು ನಿಯಂತ್ರಿಸುವ ಕ್ರಿಯೆಯ ಸೂಚಕ. ಬೃಹದಾರಣ್ಯಕ ಉಪನಿಷತ್‍ನಲ್ಲಿ ಧ್ಯಾನದ ಬಗ್ಗೆ, ಚಾಂದೋಗ್ಯ ಉಪನಿಷತ್‍ನಲ್ಲಿ ಪ್ರಾಣ ಮತ್ತು ನಾಡಿಗಳ ಬಗ್ಗೆ ವಿವರಿಸಲಾಗಿದೆ. ತೈತ್ತಿರೀಯ ಉಪನಿಷತ್ ಯೋಗದ ಮೂಲಕ ದೇಹದ ಮೇಲೆ ನಿಯಂತ್ರಣ ಸಾಧಿಸುವ ವಿಧಾನವನ್ನು ತಿಳಿಸುತ್ತದೆ. ಭಗವದ್ಗೀತೆಯಲ್ಲೂ ಸಹ ಕರ್ಮ ಯೋಗ, ಭಕ್ತಿ ಯೋಗ ಮತ್ತು ಜ್ಞಾನ ಯೋಗದ ಬಗ್ಗೆ ಉಲ್ಲೇಖಗಳಿವೆ.

Image result for yoga guru

ಯೋಗದ ಬಗ್ಗೆ ಮಾತನಾಡುವಾಗ ಯೋಗಿ ಪತಂಜಲಿಯ (ಕ್ರಿ.ಪೂ.500) ಹೆಸರು ಉಲ್ಲೇಖನೀಯ. ಅಷ್ಟಾಂಗ ಯೋಗದ ಬಗ್ಗೆ ಆತನ ಗ್ರಂಥದಲ್ಲಿ ತಿಳಿಸಲಾಗಿದೆ. ಇದೇ ರಾಜ ಯೋಗದ ಮೂಲ. ಇದು ಮುಂದೆ ತಂತ್ರದ ಬಳಕೆಯ ಮೂಲಕ ಸಿದ್ಧಿಯನ್ನು ಪಡೆಯುವ ಪ್ರಯತ್ನಕ್ಕೆ ಮೂಲ ಕಾರಣವಾಗಿ ಕುಂಡಲಿನಿ ಯೋಗದ ಆವಿಷ್ಕಾರವಾಯಿತು. ಇದರಿಂದ ವಜ್ರಾಯನ (ನಾಡಿ ಯೋಗ) ಬಳಕೆ ಬಂದಿದ್ದು ಇದು ಬೌದ್ಧ ಧರ್ಮದ ಹೇವಜ್ರ ತಂತ್ರದಲ್ಲೂ ಕಂಡುಬರುತ್ತದೆ. ನಂತರ ಬಂದದ್ದು ಹಠಯೋಗ. ಕಾಲಾನಂತರ ಜನರ ನಿರ್ಲಕ್ಷ್ಯದಿಂದ ಯೋಗದ ಆಚರಣೆ ಮತ್ತು ಬಳಕೆಗಳು ಮರೆಯಾದವು.

Image result for yoga guru

ಯೋಗದ ಮತ್ತೊಂದು ಮುಖ ಯೋಗ ತಂತ್ರ. ಇದು ಬೌದ್ಧ ತಾಂತ್ರಿಕ ಸಾಹಿತ್ಯದಲ್ಲಿ ಉಲ್ಲೇಖಿಸಲ್ಪಟ್ಟಿದ್ದು ಟಿಬೆಟ್ ಬೌದ್ಧ ಪಂಥ ನ್ಯಿಂಗ್‍ಮಪಾ ಪದ್ಧತಿಯಲ್ಲಿ ಕಂಡುಬರುತ್ತದೆ. ಯೋಗವು ತಂತ್ರ, ಚಕ್ರ, ಮುದ್ರಾ, ಮಂತ್ರ, ಮಂಡಲ, ಯಂತ್ರ, ಕುಂಡಲಿನಿ ಶಕ್ತಿ ಮತ್ತು ಉಸಿರಾಟ ನಿಯಂತ್ರಿಸುವ ಕ್ರಿಯಾ ಯೋಗ ಇತ್ಯಾದಿಗಳೊಂದಿಗೆ ಅತೀ ಕ್ಲಿಷ್ಟವಾದ ಆಂತರಿಕ ಸಂಬಂಧವನ್ನು ಹೊಂದಿದ್ದು ಇವುಗಳ ಆಚರಣೆ ಮತ್ತು ಸಿದ್ಧಿ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ತಾಂತ್ರಿಕರು ಮತ್ತು ಸಿದ್ಧರು ತಮ್ಮ ಸಾಧನೆಗಳಿಗಾಗಿ ಯೋಗದ ಮೂಲಕ ಮುನ್ನಡೆದು ನಾನಾ ಕಠಿಣ ಹಾದಿಗಳನ್ನು ಹಿಡಿದು ದಾಟಿ ಸಿದ್ಧಿಯ ಔನ್ನತ್ಯ ಮುಟ್ಟಿದ್ದು ಯೋಗದ ಪೂರ್ಣ ಗ್ರಹಿಕೆಯಿಂದಲೇ.

Related image

ಹಾಗೆಯೆ ಇವತ್ತಿನ ಪ್ರತಿಯೊಬ್ಬ ಮಾನವನಿಗೂ ಈ ಯೋಗ ಅನ್ನೋದು ಆರೋಗ್ಯದ ದೃಷ್ಟಿಯಿಂದ ತುಂಬ ಒಳಿತು.
ನಾವು ತುಂಬ ಆರೋಗ್ಯವಾಗಿರಲು ಮತ್ತು ತಜ್ಞರ ಸಲಹೆ ಕೂಡ ಯೋಗವಾಗಿದೆ.