“ತಾಜ್ ಮಹಲ್ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ” ಎಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ

0
1016

ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸುತ್ತಾರೆ. ಅದರಲ್ಲಿ ಪ್ರತಿ ವರ್ಷ 3 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗ್ರಾದಲ್ಲಿನ ತಾಜ್‌ ಮಹಲ್‌ಗೆ ಭೇಟಿ ನೀಡುತ್ತಾರೆ. ಕಾರಣ ಭಾರತದ ಪ್ರವಾಸೋದ್ಯಮ ಕ್ಷೇತ್ರ ಮುಖ್ಯವಾಗಿ ತಾಜ್‌ ಮಹಲ್‌ ಗೆ ನಮ್ಮ ರಾಷ್ಟ್ರೀಯ ಪರಂಪರೆ ಸ್ಮಾರಕ ಎಂದು ಪ್ರಾಮುಖ್ಯತೆ ನೀಡಿರುವುದರಿಂದ. ಆದರೆ ಭಾರತದಲ್ಲಿ ವಿವಿಧತೆ ಮತ್ತು ಅನೇಕ ವಾಸ್ತುಶಿಲ್ಪಗಳನ್ನು ಹೊಂದಿರುವ ಜಾಗಗಳ ಬಗ್ಗೆ ವಿದೇಶಿಯರಿಗೆ ತಿಳಿಸುವಲ್ಲಿ ಸರಕಾರ ವಿಫಲ ವಾಗುತ್ತಿದೆ.

ಸಾಂಸ್ಕೃತಿಕ ಪ್ರವಾಸೋದ್ಯಮ ತಮ್ಮ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಲು ಈ ಹಿಂದಿನ ರಾಜಕಾರಣಿಗಳು ಸೋತಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನರೇಂದ್ರ ಮೋದಿ ಸರಕಾರದ ಸಾಧನೆಗಳ ಕುರಿತು ಮಾತನಾಡಲು ಬಿಹಾರಕ್ಕೆ ಹೋದಾಗ ತಾಜ್ ಮಹಲ್ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.

source: cnichannel.com

ಆದಿತ್ಯನಾಥ್ ಅವರ ಪ್ರಕಾರ, ಆಗ್ರದಲ್ಲಿನ ತಾಜ್‌ಮಹಲ್ ಯುನೆಸ್ಕೊ ವಿಶ್ವ ಪರಂಪರೆಯ ತಾಣವು ಭಾರತೀಯರದಲ್ಲ. ವಿದೇಶಿಯರು ಭಾರತಕ್ಕೆ ಭೇಟೆ ನೀಡಲು ಮುಖ್ಯ ಕಾರಣ ರಾಮಾಯಣ ಮಹಾಭಾರತ ಇಲ್ಲಿ ನೆಡೆದಿರುವುದರಿಂದ. ಭಾರತದಲ್ಲಿ ವಿದೇಶಿ ಗಣ್ಯರು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸದ ತಾಜ್‌ಮಹಲ್ ಮತ್ತು ಮಿನಾರಗಳ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದರೆ ದೇಶದುದ್ದಕ್ಕೂ ಇರುವ ಅಸಂಖ್ಯಾತ ಐತಿಹಾಸಿಕ ಸ್ಥಳಗಳ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ.

ಭಾರತ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ದೇಶದುದ್ದಕ್ಕೂ ಆಲಯಗಳು, ಬಸದಿಗಳು, ಚರ್ಚ್‌ಗಳು, ಮಸೀದಿಗಳು, ಸ್ಥೂಪಗಳು, ಗುರುದ್ವಾರಗಳು, ವಿಹಾರಗಳು, ಜೊತೆಗೆ ಅರಮನೆಗಳು, ಕೋಟೆ ಕೊತ್ತಲುಗಳು ಯಥೇಚ್ಛವಾಗಿ ಹರಡಿಕೊಂಡಿವೆ. ಸಾವಿರಾರು ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ತಾಣಗಳ ಭಂಡಾರವಿರುವ ಭಾರತದಲ್ಲಿ ಯುನೆಸ್ಕೊ ಅಧಿಕೃತವಾಗಿ ಗುರುತಿಸಿರುವ ವಿಶ್ವ ಪರಂಪರೆಯ ತಾಣಗಳು ಕೇವಲ 32 ಮಾತ್ರ.

source: .india.com

ಈ ವಿಷಯಕ್ಕೆ ಪಾಟ್ನಾ ವಿಶ್ವವಿದ್ಯಾನಿಲಯದ ಇತಿಹಾಸ ತಜ್ಞರಾದ ಡೈಸಿ ನಾರಾಯಣ್ ಅವರು “1206 ರಿಂದ 1760 ರವರೆಗಿನ ಅವಧಿಯನ್ನು ಮಧ್ಯಕಾಲೀನ ಮತ್ತು ಪೂರ್ವ-ಆಧುನಿಕ ಇತಿಹಾಸ ಎಂದು ಕರೆಯಲಾಗುತ್ತದೆ. ಆದರೆ ಕೆಲವು ಜನರು, ವಿಶೇಷವಾಗಿ ಒಂದು ನಿರ್ದಿಷ್ಟ ರಾಜಕೀಯ ಪಟ್ಟಿಯ ಈ ಅವಧಿಯನ್ನು ಭಾರತೀಯ ಇತಿಹಾಸದ ‘ಇಸ್ಲಾಮಿಕ್ ಯುಗ’ ಎಂದು ಪರಿಗಣಿಸುತ್ತಾರೆ. ಈ ಜನರು, ಹೀಗೆ ಮಾಡುವ ಮೂಲಕ, ಇತಿಹಾಸವನ್ನು ಪುನಃ ಬರೆಯುವ ಮತ್ತು ಸತ್ಯವನ್ನು ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ತಾಜ್ ಮಹಲ್, ಇದು ನಮ್ಮ ರಾಷ್ಟ್ರೀಯ ಪರಂಪರೆ ಸ್ಮಾರಕವಾಗಿದ್ದು, ನಮ್ಮ ಸಂಸ್ಕೃತಿಯ ಭಾಗವಲ್ಲ ಎಂದು ಹೇಳಲಾಗುತ್ತಿದೆ. “