ಇನ್ಮೇಲೆ ನಿಮ್ಮ ಹಳೆಯ ವಾಹನಗಳು ರಸ್ತೆಗಿಳಿಯುವಂತಿಲ್ಲ?? ಈ ನಿಯಮ ಕರ್ನಾಟಕದ ತುಂಬೆಲ್ಲ ಜಾರಿಗೆ…

0
1470

15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ನಿಷೇಧ!!

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಪ್ರದೇಶಗಳಲ್ಲಿ 15 ವರ್ಷಕಿಂತ ಹಳೆಯ ವಾಹನವನ್ನು ಉಪಯೋಗ ಮಾಡುತ್ತಿರುವ ಜರರಿಗೆ ಶಾಕಿಂಗ್ ನ್ಯೂಸ್; ನಿಮ್ಮ ಮನೆಯಲ್ಲಿ ಹಳೆಯ ವಾಹನ ಇದೆಯಾ? ನಿಮ್ಮ ತಂದೆಯ ನೆನೆಪಿಗೊಷ್ಕರ ಇಲ್ಲ ತಾತನ ನೆನಪಿಗೊಷ್ಕರ ಹಳೆಯ ವಾಹನಕ್ಕೆ ಶಿಂಗಾರ ಮಾಡಿಕೊಂಡು ವಾಹನ ಚಲಾವಣೆ ಮಾಡುತ್ತಿದ್ದಿರ? ಇನ್ಮೇಲೆ ಅಂತಹ ವಾಹನಗಳಿಗೆ ಚಲಾವಣೆ ಅನುಮತಿಯ ಇಲ್ಲ. ಯಾಕೆ? ಏನು? ಅಂತ ಇಲ್ಲಿದೆ ನೋಡಿ.

Also read: ಹೃದಯವಿದ್ರಾವಕ ಘಟನೆ, ರಕ್ಷಣೆ ನೀಡಬೇಕಿದ್ದವನೇ ನ್ಯಾಯಾಧೀಶರ ಪತ್ನಿ, ಪುತ್ರನನ್ನು ಗುಂಡಿಟ್ಟು ಕೊಂದ ಘಟನೆ ದೇಶದಲ್ಲಿ ತಲ್ಲಣ ಮೂಡಿಸಿದೆ!!

ಭಾರತದಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸಾರಿಗೆ ಇಲಾಖೆ ಕಠಿಣ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ. ಇದರ ಮೊದಲ ಅಂಗವಾಗಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ನಿಷೇಧ ಹೇರೋ ಕಾಯ್ದೆ ತರಲು ಇಲಾಖೆ ಎಲ್ಲಾ ಸಿದ್ಧತೆ ನಡೆಸಿದೆ. ನೂತನ ನಿಯಮ ಪ್ರಕಾರ ಬೆಂಗಳೂರಿನ 16 ಲಕ್ಷ ಹಾಗೂ ಕರ್ನಾಟಕದ ಒಟ್ಟು 45 ಲಕ್ಷ ವಾಹನಗಳು ರಸ್ತೆಗಿಳಿಯುವಂತಿಲ್ಲ. ದೆಹಲಿಯಲ್ಲಿ 2019 ರಿಂದ ಜಾರಿಗೆ ಬರಲಿರುವ ಹೊಸ ಸಾರಿಗೆ ನಿಯಮವನ್ನ ಇದೀಗ ಕರ್ನಾಟಕದಲ್ಲೂ ಜಾರಿಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಮಂದಾಗಿದೆ. ಈ ಸಾಲಿನಲ್ಲಿ ಕರ್ನಾಟಕದಲ್ಲಿ 15 ವರ್ಷಕ್ಕಿಂತ ಹಳೆಯದಾದ 45.05 ಲಕ್ಷ ವಾಹನಗಳಿವೆ. ಇನ್ನು ಬೆಂಗಳೂರಿನಲ್ಲಿ 16.37 ಲಕ್ಷ ಹಳೆಯ ವಾಹನಗಳಿವೆ. ಈ ನಿಯಮ ಜಾರಿಯಾದರೆ ಈ ಹಳೇ ವಾಹನಗಳನ್ನ ಗುಜುರಿ ಗೆ ಹಾಕಬೇಕು. ಇದರಲ್ಲಿ ಸರ್ಕಾರಿ ಬಸ್‌ಗಳು ಮತ್ತು ವಾಹನಗಳೂ ಸೇರಿವೆ.

Also read: ಚತ್ತೀಸ್ಘಡದಲ್ಲಿ ಚುನಾವಣೆಗೂ ಮುಂಚೆಯೇ ಆಪರೇಷನ್ ಕಮಲ ನಡೆದು ಹೋಯಿತೇ??

ಏಕೆಂದರೆ ಸದ್ಯದ ಪರಿಸ್ಥಿಯಲ್ಲಿ ಆಗುತ್ತಿರುವ ಮಾಲಿನ್ಯವೂ ಹೀಗೆ ಮುಂದುವರೆದರೆ ದೆಹಲಿಯಲ್ಲಿರುವ ವಾತಾವರಣ ನಮ್ಮ ರಾಜ್ಯಕ್ಕೂ ಬಂದು ಹಲವು ರೋಗಗಳು ಬರುವಲ್ಲಿ ಯಾವುದೇ ಅನುಮಾನವಿಲ್ಲ ಈ ವಿಚಾರವಾಗಿ ಮಾಲಿನ್ಯ ನಿಯಂತ್ರಣಕ್ಕೆ ಈ ನಿಯಮ ಅಗತ್ಯ ಅನ್ನೋದು ತಜ್ಞರ ಮಾತು.

ಈ ವಿಷಯಕ್ಕೆ ಸಂಬಂಧಪಟ್ಟತೆ ಜನಸಾಮಾನ್ಯರ ಅಭಿಪ್ರಾಯ?

Also read: ಸಂಸದ್ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಮೋದಿ ಸರ್ಕಾರದ ಮಂತ್ರಿಗಳ ಗ್ರಾಮಗಳ ಸ್ಥಿತಿ ಸಂಪೂರ್ಣ ಹಾಳಾಗಿವೆ..

15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ನಿಷೇಧ ಹೇರೋ ಕಾಯ್ದೆಯ ಬಹುಮಟ್ಟದ ಸಂದೇಹಗಳು ಅಡಗಿವೆ ಏಕೆಂದರೆ, ಜನರಿಗೆ ವಾಹನವಿಲ್ಲದಿದ್ದರೆ ಜೀವನ ಮಾಡೋದೇ ಕಷ್ಟವಾಗಿದೆ ಅಷ್ಟೊಂದು ಅವಲಂಭಿತವಾದ ವಿಚಾರವನ್ನು ತಿಳಿದ ವಾಹನ ಕಂಪೆನಿಗಳು ಹೆಚ್ಚಿನ ಲಾಭಕ್ಕೆ ಈ ನಿಯಮಕ್ಕೆ ಒತ್ತು ನೀಡಲಾಗುತ್ತಿದೆ. ಹಳೇ ವಾಹನ ಜಕಂ ಮಾಡಿದರೆ ಜನರು ಅನಿವಾರ್ಯವಾಗಿ ಹೊಸ ವಾಹನಗಳ ಮೊರೆ ಹೋಗಲೇಬೇಕು ಅನ್ನೋ ಯೋಚನೆ ಮಾಡಿ ಸರ್ಕಾರದ ಮೂಗಿಗೆ ತುಪ್ಪ ಹಚ್ಚುತ್ತಿವೆ. ಅನೋದು ಜನ ಸಾಮಾನ್ಯರ ಮಾತು. ಆದರೆ ಶೀಘ್ರದಲ್ಲೇ ಹೊಸ ಕಾಯ್ದೆ ಪ್ರಸ್ತಾಪವಾಗಿ ದೆಹಲಿಯಲ್ಲಿ 2019ರಿಂದ ಈ ನಿಯಮ ಜಾರಿಗೆ ಬರಲಿದೆ. ಈಗಾಗಲೇ ಈ ಕುರಿತು ನೊಟೀಸ್ ಕೂಡ ನೀಡಲಾಗಿದೆ. ಈ ನಿಯಮದ ಪ್ರಕಾರ ದೆಹಲಿಯಲ್ಲಿರೋ 15 ವರ್ಷ ಹಳೆಯದಾದ ಪೆಟ್ರೋಲ್ ಕಾರು ಹಾಗೂ 10 ವರ್ಷ ಹಳೆಯದಾದ ಡೀಸೆಲ್ ಕಾರಿಗೆ ನಿಷೇಧ ಹೇರಲಾಗಿದೆ. ಇದೀಗ ಇದೇ ನಿಮಯ ಕರ್ನಾಟಕದಲ್ಲೂ ಜಾರಿಗೆ ತರಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ.