ಯುವರಾಜ್ ಸಿಂಗ್ ಮದ್ವೆ ಇನ್ವಿಟೇಶನ್ ಕಾರ್ಡ್ ಹೇಗಿದೆ ಗೊತ್ತಾ??

0
1248

ಸಂಬಂಧ ಬೆಸೆಯಲು ಮದುವೆಯ ಬಂಧ ಎಲ್ಲರನ್ನೂ ಒಂದುಗೂಡಿಸುತ್ತದೆ. ಮದುವೆಗೆ ಎಲ್ಲ ಪರಿವಾರದವರನ್ನೂ ಮದುವೆಯ ಆಮಂತ್ರಣ ಪತ್ರ ನೀಡಿ ಆಹ್ವಾನಿಸುವುದು ಒಂದು ಸಂಪ್ರದಾಯ. ಭಾರತ ಕ್ರಿಕೆಟ್ ನ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ಮಾತ್ರ ತಮ್ಮ ಮದುವೆ ಆಮಂತ್ರಣ ಪತ್ರವನ್ನು ವಿಭಿನ್ನವಾಗಿ ತಯಾರಿಸಿದ್ದಾರೆ.

25392232

ಕ್ರಿಕೆಟ್ ನ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ರವರು ಹ್ಯಾಝೆಲ್ ಕೆಎಚ್ ಬ್ರಿಟಿಷ್−ಮಾರಿಷಿಯನ್ ಮಾಡೆಲ್ ರವರನ್ನು 2016 ನವೆಂಬರ್ 30 ರಂದು ಮುಂಬೈನಲ್ಲಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ಎರಡನೇ ಮದುವೆ ಯಾಗಲಿದ್ದಾರೆ. ಈ ಮದುವೆಗೆ ಭರ್ಜರಿ ತಯಾರಿಗಳು ನಡೆದಿದ್ದು, ಮದುವೆಯ ವೆಡ್ಡಿಂಗ್ ಕಾರ್ಡ್ ತುಂಬಾ ವಿಭಿನ್ನವಾಗಿ ಚಿತ್ರಿಸಲಾಗಿದೆ.

734779971

ಎಲ್ಲರೂ ಆಮಂತ್ರಣ ಪತ್ರಿಕೆ ಪ್ರಕಟಿಸುವುದು ಸಾಮಾನ್ಯ. ಆದರೆ ಯುವಿ ರವರ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಪರಿಚಯಗಳ ಜೊತೆ ಜೊತೆಗೆ ಕಾರ್ಟೂನ್ ಚಿತ್ರಗಳೊಂದಿಗೆ ವಿನ್ಯಾಸವಾಗಿದೆ. ಆಮಂತ್ರಣ ಪತ್ರಿಕೆಯ ಥೀಮ್ ವೆಡ್ಡಿಂಗ್ ನಲ್ಲಿ ಎರಡು ವ್ಯಂಗ್ಯಚಿತ್ರಗಳನ್ನು ಸುಂದರ ಮತ್ತು ಅಸಾಂಪ್ರದಾಯಿಕವಾಗಿ ಚಿತ್ರಿಸಲಾಗಿದೆ ಎರಡೂ ಚಿತ್ರಗಳು ಅವರವರ ವೈಯಕ್ತಿಕ ವಿಷಯವನ್ನು ಹೇಳುವ ರೀತಿಯಲ್ಲಿ ಅಲಂಕರಿಸಲಾಗಿದೆ. ವಿನ್ಯಾಸಕರಾದ ಸ್ಯಾಂಡಿ ಮತ್ತು ಕಪಿಲ್ ಖುರಾನಾ ರವರ ಸಹಾಯದಿಂದ ರಚಿಸಲಾಗಿದೆ. ಹಾಗೆ ಯುವಿ ಅವರ ಚಿತ್ರ ಆರು ರನ್ನುಗಳನ್ನು ಒಂದೇ ಬಾರಿಗೆ ಗಳಿಸುವ ಹೊಡೆತದಲ್ಲಿ ರಚಿಸಲಾಗಿದೆ. ಈ ಮದುವೆ ಕಾರ್ಡ್ ನ ಹೆಸರಿಂದ ಈ ಮದುವೆ ಕಾರ್ಡ್ ಇನ್ನಷ್ಟು ವಿಶೇಷ ಮಾಡುತ್ತದೆ. ಈ ಕಾರ್ಡ್ ಹೆಸರು – ‘ಯುವರಾಜ್ ಮತ್ತು ಹ್ಯಾಝೆಲ್ ಪ್ರೀಮಿಯರ್ ಲೀಗ್. ಇದು ಲವಿಂಗ್, ಸೈರ್ಜಿ!

581816734

“ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕಾರ್ಟೂನ್ ಮತ್ತು ಚಿತ್ರಗಳ ಬಹಳಷ್ಟು ಇರುತ್ತದೆ, ವಿವಿಧ ಮತ್ತು ಮೋಜಿನ ರೀತಿಯನ್ನು ಯುವಿ ಬಯಸುತ್ತಾರೆ ಎಂದು ವಿನ್ಯಾಸಕರಾದ ಸ್ಯಾಂಡಿ ಮತ್ತು ಕಪಿಲ್ ಖುರಾನಾ ವಿವರಿಸಿದ್ದಾರೆ.” ನವೆಂಬರ್ 30 ರಂದು ಮುಂಬೈನಲ್ಲಿ ಸ್ನೇಹಿತರ ಸಮ್ಮುಖದಲ್ಲಿ, ಮತ್ತು ಡಿಸೆಂಬರ್ 2 ರಂದು ಗೋವಾದಲ್ಲಿ ಹಿಂದೂ ಆಚರಣೆಗಳಲ್ಲಿ ಪ್ರಕಾರ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ. ಹಾಗೂ ಡಿಸೆಂಬರ್ 5 ರಂದು ಸಂಗೀತ ಕಾರ್ಯಕ್ರಮ ಛತರ್ಪುರ್ ನಗರದ ಹೋಟೆಲ್ ನಲ್ಲಿ ನೆಡೆಯಲಿದೆ. ಈಗಾಗಲೇ ಆಹ್ವಾನ ನೀಡಲಾಗುತ್ತಿದೆ. ಆಮಂತ್ರಣ ಪತ್ರಿಕೆ ಆಕರ್ಷಕವಾಗಿ ಎಂದು ಕಪಿಲ್ ಖುರಾನಾ ಮೂಲಗಳಿಗೆ ತಿಳಿಸಿದ್ದಾರೆ.