‘ಉದ್ರೇಕಕಾರಿಯಾದಂತ ವರದಿ’ ಯನ್ನು ಬಿತ್ತರಿಸಿದ ಹಿನ್ನೆಲೆಯಲ್ಲಿ ಜೀ ನ್ಯೂಸ್ ನ ವರದಿಗಾರರಿಗೆ ಜಾಮೀನು ರಹಿತ ಎಫ್ಐಆರ್ ದಾಖಲೆ

0
1949

‘ಉದ್ರೇಕಕಾರಿಯಾದಂತ ವರದಿ’ ಯನ್ನು ಬಿತ್ತರಿಸಿದ ಹಿನ್ನೆಲೆಯಲ್ಲಿ, ಜೀ ನ್ಯೂಸ್ ನ ವರದಿಗಾರ ಮತ್ತು ಕ್ಯಾಮೆರಾ ಮ್ಯಾನ್ ನ ವಿರುದ್ಧ ಪಶ್ಚಿಮ ಬಂಗಾಳದ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಜೀ ನ್ಯೂಸ್ ವಾಹಿನಿಯ ಸಿಬ್ಬಂದಿಯ ಮೇಲೆ ಐ.ಪಿ.ಸಿ ಕಲಂ ೧೫೩ (ಎ) – (ಜಾತಿ, ಪಂಗಡ ಮತ್ತು ಭಾಷೆಯ ಹೆಸರಿನಲ್ಲಿ ಎರಡು ಗುಂಪು ಅಥವಾ ಕೋಮಿನಲ್ಲಿ ದ್ವೇಷ ಹುಟ್ಟಿಸುವುದು) ನ ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಝೀ ನ್ಯೂಸ್ ಸಂಪಾದಕ, ಸುಧೀರ್ ಚೌಧರಿ ಹೆಸರನ್ನು ಸಹ ಎಫ್ಐಆರ್ ನಲ್ಲಿ ಸೇರಿಸಲಾಗಿದೆ. ಸುಧೀರ್ ಚೌಧರಿ ಟ್ವಿಟ್ಟರ್ ಅಕೌಂಟಿನಲ್ಲಿ ಎಫ್ಐಆರ್ ವಾಕ್ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮತ್ತು ಧೂಳಾಘಾಟ್ ನಲ್ಲಿ ನೆಡೆದ ಗಲಭೆಗಳ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.

ಧೂಳಾಘಾಟ್ ನಲ್ಲಿ ನೆಡದ ಗಲಭೆಯ ವಿವರಣೆ

ಕೋಲ್ಕತಾ ದಿಂದ 28 ಕಿಲೋಮೀಟರ್ ದೂರದಲ್ಲಿರುವ ಧೂಳಾಘಾಟ್ ನಲ್ಲಿ, ಡಿಸೆಂಬರ್ 13 ರಂದು ಕೋಮು ಗಲಭೆಗಳನ್ನು ಕಂಡಿತ್ತು. ಗಲಭೆಗೆ ಮುಖ್ಯ ಕಾರಣ ಜಾತಿವಾದ. ಡಿಸೆಂಬರ್ 13 ರಂದು ಈದ್ ಮಿಲಾದ್ ಉಲ್ ನಬಿ ಜುಲುಸ್ (ಮೆರವಣಿಗೆ) ನಡೆಯುತ್ತಿರುವಾಗ ದಾಳಿ ಆರಂಭವಾಗಿದೆ ಎಂದು ಆರೋಪಿಸಲಾಗಿದೆ. ಮೆರವಣಿಗೆಯ ವೇಳೆ ಮನೆಗಳಿಗೆ ಮತ್ತು ಅಂಗಡಿಗಳಿಗೆ ಬಾಂಬ್ ಗಳನ್ನು ಹಾಕಿ ಬೆಂಕಿ ಹಚ್ಚಲಾಗಿದೆ ಮತ್ತು ಹಲವು ಅಂಗಡಿ ಮತ್ತು ಮನೆಗಳಿಂದ ಲೂಟಿ ಮಾಡಲಾಗಿದೆ. ಇದರಿಂದಾಗಿ ನಗರದ ಜನರು ನೆರೆಯ ಪಟ್ಟಣಗಳಿಗೆ ಪಲಾಯನ ಮಾಡಬೇಕಾಯಿತು. ಪ್ರಸ್ತುತ ಡಿಸೆಂಬರ್ 28 ರ ತನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಥಳೀಯ ಪೊಲೀಸ್ TLI ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಸ್ಥಳೀಯ ಪೊಲೀಸರು ಪರಿಸ್ಥಿತಿಯ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದ್ದಾರೆ.