ಇಂತಹ ಅಧಿಕಾರಿ ಪ್ರತಿ ಜಿಲ್ಲೆಯಲ್ಲಿ ಇದ್ರೆ ನಮ್ಮ ಕರ್ನಾಟಕ ದೇಶದಲ್ಲೇ ಮಾದರಿ ರಾಜ್ಯವಾಗಲಿದೆ..!

0
983

ಹೌದು ಇಂತಹ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ಇದ್ರೆ ನಮ್ಮ ಕರ್ನಾಟಕ ದೇಶದಲ್ಲೇ ಒಂದು ಮಾದರಿ ರಾಜ್ಯವಾಗಿ ಬೆಳೆಯುತ್ತದೆ. ಒಬ್ಬ ಅಧಿಕಾರಿ ಮನಸ್ಸು ಮಾಡಿದ್ರೆ ಸಮಾಜದಲ್ಲಿ ಎಂಥಾ ಬದಲಾವಣೆ ತರಬಹುದು ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ. ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಓ ಇಂಥಾ ಜನಮೆಚ್ಚುಗೆಯ ಕೆಲಸಕ್ಕೆ ಪಾತ್ರರಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಅದೆಷ್ಟೋ ಗ್ರಾಮಗಳ ಮನೆಗಳಲ್ಲಿ ಶೌಚಾಲಯಗಳೇ ಇರಲಿಲ್ಲ. ಇದನ್ನು ಮನಗಂಡ ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಿಇಒ ಅಶ್ವತಿ, ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸೋ ಸಲುವಾಗಿ ಒಂದು ವಿಶಿಷ್ಟ ಯೋಜನೆ ರೂಪಿಸಿದ್ರು. ಮೌಢ್ಯತೆ ಮೆಟ್ಟಿನಿಂತು ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ, ಬಾಣಂತಿಯರಿಗೆ ಮಡಿಲು ತುಂಬುವ ಜೊತೆಗೆ ಶೌಚಾಲಯ ನಿರ್ಮಿಸಿಕೊಂಡ ಮಕ್ಕಳಿಗೆ ಪ್ರಶಂಸಾ ಪತ್ರ ನೀಡುವ ಯೋಜನೆಗೆ ಕೈ ಹಾಕಿದ್ರು. ಸಿಇಓ ಅವರ ಈ ಕಳಕಳಿಗೆ ಗ್ರಾಮದ ಜನರೂ ಸಾಥ್ ನೀಡಿದ್ರು. ಪರಿಣಾಮ ಎಲ್ಲವೂ ಅವರಂದುಕೊಂಡತೆಯೇ ಆಗ್ತಿದೆ. ಬಯಲು ಶೌಚಮುಕ್ತ ಜಿಲ್ಲೆಯಲ್ಲಿ 18ನೇ ಸ್ಥಾನದಲ್ಲಿದ್ದ ದಾವಣಗೆರೆ ಈಗ 3 ಸ್ಥಾನಕ್ಕೆ ಬಂದಿದೆ.

ಸಿಇಒ ಅಶ್ವಥಿ ಕಳೆದ 3 ತಿಂಗಳಿನಿಂದ ಅಧಿಕಾರಿಗಳೊಂದಿಗೆ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ರು. ಜನರಲ್ಲಿರುವ ಮೂಢನಂಬಿಕೆಯನ್ನ ದೂರವಾಗಿಸಿದ್ರು. ಜಿಲ್ಲೆಯಲ್ಲಿ 300 ಗರ್ಭಿಣಿಯರು ಹಾಗೂ 35 ಬಾಣಂತಿಯರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಸೈ ಎನಿಸಿಕೊಂಡ್ರು.

ಬೆಣ್ಣೆನಗರಿಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಿಇಓ ಪಣ ತೊಟ್ಟು ಯಶಸ್ವಿ ಹಾದಿಯಲ್ಲಿದ್ದಾರೆ. ಇನ್ನು ಅಕ್ಟೋಬರ್ 2ರಂದು ಬಯಲು ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡುವುದೊಂದೇ ಬಾಕಿ ಇದೆ.

ಅಕ್ಟೋಬರ್ 2ರ ಒಳಗೆ ಬಯಲು ಬಹಿರ್ದೆಸೆ ಜಿಲ್ಲೆಯನ್ನಾಗಿ ಮಾಡಬೇಕೆಂದು ಪಣತೊಟ್ಟಿದ್ದರಿಂದ ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಅಶ್ವಥಿ, ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜನರಲ್ಲಿ ಶೌಚಾಲಯದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಅದೇ ರೀತಿ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆದ್ರೆ ಗ್ರಾಮದ ಕುಟುಂಬವೊಂದು ಶೌಚಾಲಯ ಕಟ್ಟಲು ವಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ಸಿಇಓ ಆ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದು ಫಲಪ್ರದವಾಗದಾಗ ಸ್ವತಃ ತಾವೇ ಸಲಿಕೆ ಹಿಡಿದು ಮಣ್ಣನ್ನು ಬಗೆದು ಪಕ್ಕಕ್ಕೆ ಹಾಕಲು ಶುರು ಮಾಡಿದ್ರು.

ಉನ್ನತ ಮಟ್ಟದ ಮಹಿಳಾ ಉದ್ಯೋಗಿಯೊಬ್ಬರು ಸಲಿಕೆ ಹಿಡಿದು ಕೆಲಸ ಪ್ರಾರಂಭಿಸಿದ್ದನ್ನು ನೋಡಿ ಸ್ಥಳೀಯರಿಗೆ ಮುಜುಗರ ಉಂಟಾಯಿತು. ಅಲ್ಲದೇ ನೆರೆದಿದ್ದವರು ಸಿಇಓ ಅವರನ್ನು ಪರಿಪರಿಯಾಗಿ ಬೇಡಿಕೊಂಡರು. ಆದ್ರೆ ಅಶ್ವಥಿ ಮಾತ್ರ ತಮ್ಮ ಕೆಲಸ ನಿಲ್ಲಿಸಿಲ್ಲ. ಇದರಿಂದ ಮುಜುಗರಗೊಂಡ ಕುಟುಂಬದ ಯಜಮಾನ ತಾವೇ ಶೌಚಾಲಯಕ್ಕೆ ಗುಂಡಿ ತೋಡುವುದಾಗಿ ಭರವಸೆ ನೀಡಿದ್ರು. ಆದ್ರೆ ಇದರಿಂದ ಅನುಮಾನಗೊಂಡ ಸಿಇಓ ಶೌಚಾಲಯ ನಿರ್ಮಾಣ ಹಂತದ ಪ್ರತಿ ಫೋಟೋಗಳನ್ನು ಕಳುಹಿಸುವಂತೆ ಹೇಳಿದ್ದಾರೆ.

ನೋಡಿ ಇಂತಹ ಸಿಇಒ ಪ್ರತಿ ಜಿಲ್ಲೆಯಲ್ಲಿ ಇದ್ರೆ ನಮ್ಮ ರಾಜ್ಯ ದೇಶದಲ್ಲೇ ಮಾದರಿ ರಾಜ್ಯ ಆಗೋದ್ರಲ್ಲಿ ಅನುಮಾನ ಇಲ್ಲ ಅನ್ಸುತ್ತೆ.